ಶೃಂಗೇರಿ : (ನ್ಯೂಸ್ ಮಲ್ನಾಡ್ ವರದಿ) ತೀರ್ಥಹಳ್ಳಿ ಯಲ್ಲಿ ನಡೆದ ಬಜರಂಗದಳ ಕಾರ್ಯಕರ್ತರ ಮೇಲಿನ ಮಾರಣಾಂತಿಕ ದಾಳಿಯನ್ನು ಖಂಡಿಸಿ ಶೃಂಗೇರಿಯ ತಾಲೂಕು ಬಜರಂಗದಳ ಘಟಕವು ಆರೋಪಿಗಳ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕೆಂದು ಮನವಿ ಸಲ್ಲಿಸಿದೆ

ನಿನ್ನೆ ತೀರ್ಥಹಳ್ಳಿಯಲ್ಲಿ ಅಕ್ರಮ ಗೋಸಾಗಾಟ ನಡೆಸುತ್ತಿದ್ದ ಆರೋಪಿಗಳನ್ನು ತಡೆಯಲು ಹೋದ ಬಜರಂಗದಳದ ಇಬ್ಬರ ಕಾರ್ಯಕರ್ತರ ಮೇಲೆ ಗೋಹಂತಕರು ವಾಹನವನ್ನು ಹತ್ತಿಸಿ ಮಾರಣಾಂತಿಕವಾಗಿ ಅವರ ಮೇಲೆ ನಡೆಸಿದ ಹಲ್ಲೆಯನ್ನು ಖಂಡಿಸಿ ವಿವಿಧ ಹಿಂದೂಪರ ಸಂಘಟನೆಗಳು ರಾಜ್ಯದ ಹಲವೆಡೆಗಳಲ್ಲಿ ಪ್ರತಿಭಟನೆ ನಡೆಸುತ್ತಿದೆ.

ಅಕ್ರಮ ಗೋ ಸಾಗಾಟಗಾರರ ಮೇಲೆ ಕಠಿಣ ಕಾನೂನು ಕ್ರಮಗಳನ್ನು ಇಲಾಖೆಯ ಅಧಿಕಾರಿಗಳು ತೆಗೆದುಕೊಳ್ಳಬೇಕು, ಗೋಹತ್ಯೆಯ ವಿರುದ್ಧವಾದ ಕಠಿಣ ಕಾನೂನುಗಳು ರಾಜ್ಯದಲ್ಲಿ ಜಾರಿಯಲ್ಲಿದ್ದರೂ ಕೂಡಾ ಮತ್ತೆ ಮತ್ತೆ ಈ ರೀತಿಯ ಘಟನೆಗಳು ಜಿಲ್ಲೆಯಲ್ಲಿ ಮರುಕಳಿಸುತ್ತಿರುವುದು ದುರದೃಷ್ಟಕರ ಸಂಗತಿ ಆದಷ್ಟು ಬೇಗ ಉಳಿದ ಆರೋಪಿಗಳನ್ನು ಬಂಧಿಸಬೇಕೆಂದು ಶೃಂಗೇರಿ ಬಜರಂಗದಳದ ಕಾರ್ಯಕರ್ತರು ಆಗ್ರಹಿಸಿದರು. ಅತಿ ಶೀಘ್ರವಾಗಿ ಆರೋಪಿಗಳನ್ನು ಬಂಧಿಸಿ ಕಠಿಣ ಕ್ರಮಗಳನ್ನು ಜರುಗಿಸಿದೆ ಹೋದಲ್ಲಿ ತೀರ್ಥಹಳ್ಳಿ ಚಲೋ ಗೆ ಕರೆ ನೀಡುವುದಾಗಿ ಶೃಂಗೇರಿ ಬಜರಂಗದಳ ತಿಳಿಸಿದೆ.


ಗೋವುಗಳನ್ನು ರಕ್ಷಣೆ ಮಾಡಲು ತೆರಳಿದ ಬೆಜ್ಜವಳ್ಳಿಯ ಕಿರಣ್ ಹಾಗೂ ರಕ್ಷಿತ್ ಎಂಬ ಯುವಕರ ಮೇಲೆ ನಡೆದಿರುವ ಮಾರಣಾಂತಿಕ ಹಲ್ಲೆಯನ್ನು ಬಜರಂಗದಳ ತೀವ್ರವಾಗಿ ಖಂಡಿಸುತ್ತದೆ. ಗೋವುಗಳ ರಕ್ಷಣೆ ನಮ್ಮ ಕರ್ತವ್ಯವಾಗಿದೆ, ಗೋವುಗಳ ರಕ್ಷಣೆ ಮಾಡಲು ತೆರಳಿದವರ ಮೇಲೆ ಅದೆಷ್ಟೋ ಪ್ರಕರಣಗಳು ದಾಖಲಾದ ನಿದರ್ಶನಗಳಿವೆ. ಈ ಕೃತ್ಯದ ಹಿಂದಿರುವವರಿಗೆ ಕಠಿಣ ಶಿಕ್ಷೆಯಾಗಲೇಬೇಕು. ನಾಗೇಶ್ ಶೆಟ್ಟಿ, ತಾಲೂಕು ಗೋರಕ್ಷಾ ಪ್ರಮುಖ್, ಶೃಂಗೇರಿ.

ಈ ಸಮಯದಲ್ಲಿ ತಾಲೂಕು ಸಂಚಾಲಕ ರವಿ ಸಂಜಯ್ ಪೂಜಾರಿ, ಗೋರಕ್ಷಾ ಪ್ರಮುಖ್ ನಾಗೇಶ್ ಶೆಟ್ಟಿ, ನಗರ ಸಂಯೋಜಕರಾದ ಸಂತೋಷ್ ಕೆರೆಮನೆ, ಕಾರ್ತಿಕ, ಸುಮಂತ್ ಕಿಗ್ಗ, ರವೀಂದ್ರ ಇನ್ನಿತರ ಬಜರಂಗದಳದ ಕಾರ್ಯಕರ್ತರು ಹಾಜರಿದ್ದರು.