ಕೊಡಗು :(ನ್ಯೂಸ್ ಮಲ್ನಾಡ್ ವರದಿ) ಕಾಫಿ ಬೆಳೆಗೆ ಪ್ರಸಿದ್ಧವಾದ ಚಿಕ್ಕಮಗಳೂರು, ಹಾಸನ, ಕೊಡಗು ಜಿಲ್ಲೆಗಳಲ್ಲಿ ಕಾಫಿಯನ್ನು ಒಣಗಿಸಲು ಗ್ರೀನ್ ಹೌಸ್ ಗಳನ್ನು ನಿರ್ಮಾಣಮಾಡಿ ರೈತರಿಗೆ ಅನುಕೂಲಕರ ವಾತಾವರಣ ಸೃಷ್ಟಿಮಾಡಿಕೊಡುವಂತೆ ಸರ್ಕಾರಕ್ಕೆ ಮನವಿ ನೀಡಲಾಗಿದೆ.
ರಾಜ್ಯಾದ್ಯಂತ ಭೀಕರವಾಗಿ ಉಂಟಾಗಿರುವ ಮಳೆಗೆ ಹೆಚ್ಚಿನ ಬೆಳೆಗಾರರು ನಷ್ಟ ಹೊಂದಿದ್ದಾರೆ. ಅವರ ನಷ್ಟವನ್ನು ಸರಿದೂಗಿಸುವ ಸಲುವಾಗಿ ಹಾಗೂ ಮುಂದಿನ ದಿನಗಳಲ್ಲಿ ಅನಾನುಕೂಲ ಉಂಟಾಗದಂತೆ ಎಚ್ಚರ ವಹಿಸುವ ಸಲುವಾಗಿ ಗ್ರೀನ್ ಹೌಸ್ ಗಳನ್ನು ನಿರ್ಮಾಣ ಮಾಡಿ ಕೊಡಬೇಕೆಂದು ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ.
ಮಲೆನಾಡು ಭಾಗದ ಕಾಫಿ ಬೆಳೆಗಾರರು ಈ ಮಳೆಯಿಂದಾಗಿ ಬಹಳ ಸಂಕಷ್ಟವನ್ನು ಅನುಭವಿಸುತ್ತಿರುವ ಕಾರಣ ಶೀಘ್ರವಾಗಿ ಪರಿಹಾರ ಘೋಷಣೆ ಮಾಡಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಜಿಲ್ಲೆಗಳ ಪರಿಸ್ಥಿತಿಯನ್ನು ಜಿಲ್ಲಾಧಿಕಾರಿಗಳು ಈಗಾಗಲೇ ಸರ್ಕಾರಕ್ಕೆ ತಲುಪಿಸಿದ್ದು ಆದಷ್ಟು ಶೀಘ್ರವಾಗಿ ಬೆಳೆಗಾರರಿಗೆ ಪರಿಹಾರ ಲಭ್ಯವಾಗಲಿದೆ ಎಂಬ ಭರವಸೆಯನ್ನು ಅಧಿಕಾರಿಗಳು ನೀಡಿದ್ದಾರೆ. ಗ್ರೀನ್ ಹೌಸ್ ಗಳ ನಿರ್ಮಾಣ ಕಾರ್ಯವು ಆದಷ್ಟು ಬೇಗ ಜರುಗಿ ಇದರ ಸೌಲಭ್ಯವನ್ನು ಕೃಷಿಕರು ಪಡೆಯುವಂತಾಗಲಿ ಎಂದು ಕಾಫಿ ಮಂಡಳಿಯ ಸದಸ್ಯರು ಹೇಳಿದರು.
ಈ ಸಂದರ್ಭದಲ್ಲಿ ಕೊಡಗಿನ ಕಾಫಿ ಬೆಳೆಗಾರರ ಸಂಘದ ಅಧ್ಯಕ್ಷ ಮೋಹನ್ ಬೋಪಣ್ಣ, ಕೂರ್ಗ್ ಪ್ಲಾಂಟರ್ಸ್ ಅಸೋಸಿಯೇಶನ್ ಅಧ್ಯಕ್ಷ ಬಿ.ವಿ.ಮೋಹನ್ ದಾಸ್, ಎಸ್.ಜಿ.ಮೇದಪ್ಪ, ಹಾಸನ ಕಾಫಿ ಮಂಡಳಿಯ ವಿಸ್ತರಣಾ ವಿಭಾಗದ ಜಂಟಿ ನಿರ್ದೇಶಕ ಜಿ.ತಿಮ್ಮರಾಜು, ಕೊಡಗು ಕಾಫಿ ಮಂಡಳಿ ಉಪ ನಿರ್ದೇಶಕ ಬಿ.ಶಿವಕುಮಾರಸ್ವಾಮಿ ಹಾಗೂ ಇನ್ನಿತರ ರೈತ ಮುಖಂಡರು ಉಪಸ್ಥಿತರಿದ್ದರು.

0 Comments