ಚಿಕ್ಕಮಗಳೂರು : (ನ್ಯೂಸ್ ಮಲ್ನಾಡ್ ವರದಿ) ವಿಧಾನಪರಿಷತ್ ಚುನಾವಣೆಯ ಕಣ ದಿನೇ ದಿನೇ ರಂಗೇರುತ್ತಿದೆ, ಆರೋಪ ಪ್ರತ್ಯಾರೋಪಗಳ ನಡುವೆ ಚಿಕ್ಕಮಗಳೂರು ಜಿಲ್ಲೆಯಲ್ಲಿ ವಿವಾದವೊಂದು ಭುಗಿಲೆದ್ದಿದೆ.
ವಿಧಾನ ಪರಿಷತ್ ಚುನಾವಣೆಗೆ ಕಾಂಗ್ರೆಸ್ ಪಕ್ಷದಿಂದ ಅಭ್ಯರ್ಥಿಯಾಗಿ ಗಾಯತ್ರಿ ಶಾಂತೇಗೌಡ ಅವರು ನಾಮಪತ್ರ ಸಲ್ಲಿಕೆ ಮಾಡಿದ್ದಾರೆ, ಆದರೆ ಅವರಿಗೆ ಪಕ್ಷದ ವತಿಯಿಂದ ನೀಡುವ ಬಿ ಫಾರ್ಮ್ ಅನ್ನು ಸರ್ಕಾರಿ ಅಧಿಕಾರಿಯಾಗಿರುವ ಅಬಕಾರಿ ಇಲಾಖೆಯ ಜಾರಿ ಅಧಿಕಾರಿ ಬಿ.ಎಂ ಸುನೀಲ್ ಅವರು ಪಡೆದುಕೊಂಡಿರುತ್ತಾರೆ. ಇದು ಕಾನೂನು ಬಾಹಿರವಾಗಿದೆ ಎಂದು ಆರೋಪಿಸಿ ಚಿಕ್ಕಮಗಳೂರು ಭಾರತೀಯ ಜನತಾ ಪಾರ್ಟಿಯು ರಾಜ್ಯ ಚುನಾವಣಾಧಿಕಾರಿಗಳಿಗೆ ಹಾಗೂ ಜಿಲ್ಲಾಧಿಕಾರಿಗಳಿಗೆ ದೂರು ನೀಡಿದೆ.
ಘಟನೆಯ ಕುರಿತಾಗಿ ಸಾಮಾಜಿಕ ಜಾಲತಾಣಗಳಲ್ಲಿ ಕಾಂಗ್ರೆಸ್ ನ ಕೆಲ ಮುಖಂಡರು ಸರ್ಕಾರಿ ಅಧಿಕಾರಿ ಬಿ.ಎಂ ಸುನೀಲ್ ಅವರು ಬಿ.ಫಾರ್ಮ್ ಪಡೆಯುವ ಫೋಟೋವನ್ನು ಹಾಕಿದ್ದರು. ಇದನ್ನು ಪ್ರಮುಖವಾಗಿಟ್ಟುಕೊಂಡು ಬಿಜೆಪಿಯು ಘಟನೆಯ ಕುರಿತಾಗಿ ದೂರು ದಾಖಲು ಮಾಡಿದೆ. ಹಾಗೂ ಸಂಬಂಧಪಟ್ಟವರ ಮೇಲೆ ಕಾನೂನು ರೀತಿಯ ಕ್ರಮಗಳನ್ನು ಕೈಗೊಳ್ಳಬೇಕೆಂದು ಮನವಿಮಾಡಿದೆ.

0 Comments