ಕೊಡಗು : (ನ್ಯೂಸ್ ಮಲ್ನಾಡ್ ವರದಿ) ಕೊಡವರ ರಕ್ಷಣೆಗಾಗಿ ಹೊಸ ಯೋಜನೆಯನ್ನು ಜಾರಿಗೆ ತರಲು ಕೊಡಗು ಹಾಗೂ ಮೈಸೂರಿನ ಸಂಸದ ಪ್ರತಾಪ್ ಸಿಂಹ ತಯಾರಿ ನಡೆಸುತ್ತಿರುವುದಾಗಿ ತಿಳಿಸಿದ್ದಾರೆ.

ಕೊಡವರ ಅಭಿವೃದ್ದಿಯ ಕಾರಣಕ್ಕಾಗಿ ಕೊಡವ ಬಾಳೋ ಎಂಬ ಯೋಜನೆಯನ್ನು ಅನುಷ್ಠಾನಕ್ಕೆ ತರಲು ಪ್ರಯತ್ನ ನಡೆಸುತ್ತಿರುವುದಾಗಿ ತಿಳಿಸಿದ್ದಾರೆ. ರಾಜ್ಯದಲ್ಲಿ ಈಗ ಸ್ಥಾಪನೆಯಾಗಿರುವ ಇತರ ನಾಲ್ಕು ಅಭಿವೃದ್ಧಿ ನಿಗಮಗಳಿಗಿಂತಲೂ ಕೊಡವ ಅಭಿವೃದ್ಧಿ ನಿಗಮ ಸ್ಥಾಪನೆ ಎಲ್ಲಾ ರೀತಿಯಲ್ಲೂ ಪ್ರಾಶಸ್ತ್ಯ ಪಡೆದಿದೆ. ಕೊಡವ ಅಭಿವೃದ್ಧಿ ನಿಗಮದಿಂದ ಕೊಡವ ಜನಾಂಗದ ಸರ್ವೋತೋಮುಖ ಅಭಿವೃದ್ಧಿ ಸಾಧ್ಯ ಎಂದು ಸಂಸದ ಪ್ರತಾಪ್ ಸಿಂಹ ತಿಳಿಸಿದ್ದಾರೆ. 

ಬೇರೆ ಜನಾಂಗಗಳ ಅಭಿವೃದ್ಧಿಗಾಗಿ ಇರುವ ನಿಗಮದಂತೆ ಕೊಡವರ ಸರ್ವತೋಮುಖ ಅಭಿವೃದ್ಧಿಗಾಗಿ ಈ ನಿಗಮದ ಸ್ಥಾಪನೆ ಅತ್ಯವಶ್ಯಕ ಹಾಗೂ  ಯುನೈಟೆಡ್ ಕೊಡವ ಆರ್ಗನೈಝೇಶನ್ ಸಂಘಟನೆಯ ಮನವಿಯನ್ನು ಈಡೇರಿಸುವ ಉದ್ದೇಶದಿಂದ ಈ ಕಾರ್ಯವನ್ನು ಆದಷ್ಟು ಬೇಗ ಕಾರ್ಯರೂಪಕ್ಕೆ ತರಲಾಗುವುದು ಎಂದು ಸಂಸದರು ತಿಳಿಸಿದ್ದಾರೆ. ಹಾಗೂ ಈ ಕುರಿತಾಗಿ ರಾಜ್ಯದ ಹಲವು ಮಂತ್ರಿಗಳು ಕೂಡ ಒಮ್ಮತದ ವಿಶ್ವಾಸ ನೀಡಿ ಸಹಕಾರ ನೀಡುವ ಭರವಸೆ ನೀಡಿರುವುದು ಸಂತೋಷ ತಂದಿದೆ ಎಂದು ತಿಳಿಸಿದರು.