ಚಿಕ್ಕಮಗಳೂರು : ಎಲ್ಲರ ಬಳಿ ಹಣ ಬೇಡುವ ಭಿಕ್ಷಕಿ ಯೋರ್ವರು ದೇವಾಲಯದ ಬಳಿ ಬಂದು ದೇವಸ್ಥಾನದ ಆಡಳಿತ ಮಂಡಳಿಯ ಅಧ್ಯಕ್ಷರನ್ನು ಹುಡುಕಿ ಅವರ ಬಳಿ ಹಣ ನೀಡಿ ದೇವರಿಗೆ ಮುಖವಾಡ ಮಾಡಿ ಹಾಕಿಸಿ ಎಂದ ಆಶ್ಚರ್ಯಕರ ಘಟನೆ ಕಡೂರಿನಲ್ಲಿ ನಡೆದಿದೆ.

ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಕೋಟೆ ಪಾತಾಳ ಆಂಜನೇಯ ಸ್ವಾಮಿ ದೇವಸ್ಥಾನಕ್ಕೆ ಆಗಮಿಸಿದ ಭಿಕ್ಷುಕಿ ರೂಪದಲ್ಲಿದ್ದ ಭಕ್ತೆ ಯೋರ್ವರು, ಆಂಜನೇಯ ದೇವಾಲಯದ ಆಡಳಿತ ಮಂಡಳಿಯ ಅಧ್ಯಕ್ಷರನ್ನು ಹುಡುಕಿಕೊಂಡು ಹೋಗಿ ತಮ್ಮ ಬಳಿಯಿದ್ದ 500 ರೂಪಾಯಿಗಳ 20 ನೋಟನ್ನು ಅಧ್ಯಕ್ಷರ ಕೈಗಿತ್ತು ಈ ಹಣದಲ್ಲಿ ಆಂಜನೇಯ ಸ್ವಾಮಿಗೆ ಬೆಳ್ಳಿಯ ಮುಖವಾಡ ಮಾಡಿಸಿ ಹಾಕಿ ಎಂದು ಅವರಲ್ಲಿ ಕೋರುತ್ತಾರೆ. ಅಜ್ಜಿಯ ಈ ಮಾತಿಗೆ ಅಲ್ಲಿದ್ದ ಆಡಳಿತ ಮಂಡಳಿಯ ಸದಸ್ಯರು ಮೂಕ ವಿಸ್ಮಿತರಾಗಿದ್ದಾರೆ. 

ಈ ಅಜ್ಜಿಯ ಹೆಸರು ಕೆಂಪಮ್ಮ ಎಂದು ತಿಳಿದುಬಂದಿದೆ, ಈಕೆಯು ಕಡೂರಿನ ಸಾಯಿಬಾಬಾ ದೇವಸ್ಥಾನದ ಹೊರಗೆ ಭಿಕ್ಷೆ ಬೇಡುತ್ತಾರೆ ಎಂದು ತಿಳಿದುಬಂದಿದೆ. ಎಲ್ಲರೂ ಇವರನ್ನು ಕೆಂಪಜ್ಜಿ ಎಂದು ಕರೆಯುತ್ತಾರೆ. ಹಣ ನೀಡಿದ ಅಜ್ಜಿಯನ್ನು ಕಂಡ ಜನರು ಅವರೊಂದಿಗೆ ಸೆಲ್ಫೀಗಾಗಿ ಮುಗಿಬಿದ್ದರು, ಅಜ್ಜಿ ಎಲ್ಲರಿಗೂ  ಪೋಸ್ ನೀಡಿ ಹಿಂದಿರುಗಿದರು. 

ತನು ಕೊಟ್ಟಿಗೆಹಾರ, ವರದಿಗಾರರು.