ಜಿಲ್ಲೆಯ ಮೂಡಿಗೆರೆ ತಾಲ್ಲೂಕಿನ ಚಾರ್ಮಾಡಿ ಘಾಟ್ ನಲ್ಲಿರುವ ಆಲೇಖಾನ್ ಜಲಪಾತದ ರಮಣೀಯ ದೃಶ್ಯವನ್ನು ಸೆರೆ ಹಿಡಿಯಲು ಪತ್ರಕರ್ತರೊಬ್ಬರು ಹಾಸನ ಮೂಲದ ವ್ಯಕ್ತಿಯೊಬ್ಬರ ಜೊತೆ ಡ್ರೋನ್ ಕ್ಯಾಮರಾದಲ್ಲಿ ದೃಶ್ಯವನ್ನು ಸೆರೆಹಿಡಿಯುತ್ತಿದ್ದರು.
ಜಲಪಾತ ದುಮ್ಮಿಕ್ಕುವ ಮೋಹಕ ದೃಶ್ಯವನ್ನು ಸೆರೆಹಿಡಿಯಲು ಅದನ್ನು ಹಾರಿಸಿದಾಗ ಆಕಸ್ಮಿಕವಾಗಿ ನೀರಿನ ರಭಸಕ್ಕೆ ಸಿಕ್ಕಿ ಆಯತಪ್ಪಿ ನೀರಿಗೆ ಬಿದ್ದಿದೆ. ಡ್ರೋನ್ ನೀರಿಗೆ ಬಿದ್ದ ತಕ್ಷಣ ಕೆಳಗೆ ಇಳಿದು ಹುಡುಕಾಡಿದರೂ ಕ್ಯಾಮರಾ ಪತ್ತೆಯಾಗಿಲ್ಲ. ಆ ಡ್ರೋನ್ ಕ್ಯಾಮರಾದ ಬೆಲೆ 3.50 ಲಕ್ಷ ಎಂದು ಅವರು ತಿಳಿಸಿದ್ದಾರೆ.
ನಂತರ ಸಕ್ರಿಯ ಸಮಾಜ ಸೇವಾ ಸಂಸ್ಥೆಯ ಫಿಶ್ ಮೋಣು ಮತ್ತು ಆರಿಫ್ ಸ್ಥಳಕ್ಕೆ ಆಗಮಿಸಿ ಶೋಧಕಾರ್ಯ ನಡೆಸಿದರು. ಆದರೆ ಕೊಚ್ಚಿ ಹೋಗಿರುವ ಕ್ಯಾಮರಾ ಇನ್ನೂ ಪತ್ತೆಯಾಗಿಲ್ಲ ಎಂಬ ಮಾಹಿತಿ ತಿಳಿದುಬಂದಿದೆ.

0 Comments