ಹಾಸನ : (ನ್ಯೂಸ್ ಮಲ್ನಾಡ್ ವರದಿ) ಮ್ಯಾನ್ ಹೋಲ್ ಗೆ ಯಂತ್ರಗಳನ್ನು ಬಳಸದೆ ಪೌರ ಕಾರ್ಮಿಕರನ್ನು ಇಳಿಸಿ ಸ್ವಚ್ಛಗೊಳಿಸಿದ ಅಮಾನವೀಯ ಘಟನೆ ಹಾಸನದಲ್ಲಿ ನಡೆದಿದೆ.
ಹಾಸನದ ಪಟ್ಟಣ ಪಂಚಾಯತ್ ಅಧಿಕಾರಿಗಳು ಮ್ಯಾನ್ ಹೋಲ್ ಶುಚಿಗೊಳಿಸುವ ಸಕ್ಕಿಂಗ್ ಯಂತ್ರ ಇದ್ದರೂ ಕೂಡ ಈ ಕೆಲಸವನ್ನು ಪೌರ ಕಾರ್ಮಿಕರ ಬಳಿ ಈ ಕೆಲಸವನ್ನು ಮಾಡಿಸಿದ್ದಕ್ಕೆ ಅಧಿಕಾರಿಗಳ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
ಹೊಳೆನರಸೀಪುರದ ಹದಿನೇಳನೇ ವಾರ್ಡ್ ನಲ್ಲಿ ಈ ಘಟನೆ ನಡೆದಿದೆ. ಕಾರ್ಮಿಕರನ್ನು ಮ್ಯಾನ್ ಹೋಲ್ ಗೆ ಇಳಿಸದಂತೆ ಸರ್ಕಾರ ನಿರ್ಬಂಧ ಹೇರಿದ್ದರೂ ಕೂಡ ಈ ರೀತಿಯ ಘಟನೆ ನಡೆದಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಯಂತ್ರ ವಿದ್ದರೂ ಕೂಡ ಈ ರೀತಿಯ ಕೆಲಸಗಳನ್ನು ಕಾರ್ಮಿಕರ ಬಳಿ ಮಾಡಿಸಿದ ಅಧಿಕಾರಿಗಳ ಬೇಜವಾಬ್ದಾರಿಗೆ ಶಿಕ್ಷೆಯಾಗಲೇಬೇಕು ಎಂದು ಸ್ಥಳೀಯರು ತೀವ್ರವಾಗಿ ಆಗ್ರಹಿಸಿದ್ದಾರೆ.

0 Comments