ಶಿವಮೊಗ್ಗ : (ನ್ಯೂಸ್ ಮಲ್ನಾಡ್ ವರದಿ) ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ ಅಪಾರ ಮೌಲ್ಯದ ಶ್ರೀ ಗಂಧದ ತುಂಡುಗಳನ್ನು ಶಿವಮೊಗ್ಗ ಪೊಲೀಸರು ಕಾರ್ಯಾಚರಣೆ ನಡೆಸಿ ವಶಪಡಿಸಿಕೊಂಡಿದ್ದಾರೆ.
ಶಿವಮೊಗ್ಗ ನಗರದ ಗೋದಾಮು ಒಂದರಲ್ಲಿ ಅಪಾರವಾಗಿ ಸಂಗ್ರಹಿಸಿಟ್ಟಿದ್ದ 910 ಕೆಜಿ ಶ್ರೀ ಗಂಧದ ತುಂಡುಗಳನ್ನು ಶಿವಮೊಗ್ಗದ ತುಂಗಾ ನಗರ ಠಾಣೆಯ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಈ ಗೋದಾಮು ಹೊರಗಿನಿಂದ ನೋಡಲು ಬಹಳ ಅಚ್ಚುಕಟ್ಟಾಗಿ ಕಂಡರೂ ಕೂಡ ಒಳಗೆ ತುಂಡು ತುಂಡು ಮಾಡಿ ಸಂಗ್ರಹಣೆ ಮಾಡಿರುವ 910 ಕೆಜಿ ತೂಕದ ಶ್ರೀ ಗಂಧದ ತುಂಡುಗಳು ಲಭಿಸಿದೆ.
ಅಕ್ರಮವಾಗಿ ಗಂಧದ ತುಂಡುಗಳನ್ನು ಅಚ್ಚುಕಟ್ಟಾಗಿ ಸಂಗ್ರಹಣೆ ಮಾಡಿದವ್ಯಕ್ತಿಯನ್ನು ಅಪ್ಸರ್ ಎಂದು ಗುರುತಿಸಲಾಗಿದೆ. ಶ್ರೀ ಗಂಧದ ಮರವನ್ನು ಕಡಿದು ಸಾಗಣೆ ಮಾಡುವ ಮರಗಳ್ಳರಿಂದ ಅಪ್ಸರ್ ಖರೀದಿ ಮಾಡಿ ತುಂಡುಗಳಾಗಿ ಮಾಡಿ ಸಂಗ್ರಹಣೆ ಮಾಡುತ್ತಿದ್ದ ಎಂಬ ಮಾಹಿತಿ ಲಭ್ಯವಾಗಿದೆ.
ಈ ದಾಳಿಯಲ್ಲಿ ಭಾಗವಹಿಸಿದ ಅರಣ್ಯ ಇಲಾಖೆಯ ಅಧಿಕಾರಿಗಳು ಹಾಗೂ ಪೊಲೀಸರು ಈ ದಾಳಿಯಿಂದ ದಾಖಲೆ ನಿರ್ಮಾಣ ಮಾಡಿದ್ದಾರೆ. ಒಂದೇ ಬಾರಿಗೆ ಒಂಬೈನೂರಕ್ಕು ಅಧಿಕ ಕೆಜಿ ಗಂಧದ ತುಂಡುಗಳನ್ನು ಕಾರ್ಯಾಚರಣೆಯ ಮೂಲಕ ವಶಪಡೆದ ಪೊಲೀಸರು ಆರೋಪಿ ಅಪ್ಸರ್ ನನ್ನು ಬಂಧಿಸಿ ಆತನ ಹಿಂದಿರುವ ವ್ಯಕ್ತಿಗಳ ಕುರಿತಾಗಿ ಮಾಹಿತಿ ಕಲೆಹಾಕುತ್ತಿದ್ದಾರೆ.
ಮಲೆನಾಡು ಭಾಗದಲ್ಲಿ ಮರಗಳ್ಳತನ ಎಗ್ಗಿಲ್ಲದೇ ನಡೆಯುತ್ತಿದ್ದು ಮುಂದಿನ ದಿನಗಳಲ್ಲಿ ಆರೋಪಿಗಳನ್ನು ಬಂಧಿಸುವ ನಿಟ್ಟಿನಲ್ಲಿ ಎಲ್ಲಾ ಯೋಜನೆಗಳು ಸಿದ್ಧವಾಗುತ್ತಿದೆ ಎಂಬ ಮಾಹಿತಿ ಲಭ್ಯವಾಗಿದೆ. ಆರೋಪಿಗೆ ಕಾನೂನು ರೀತಿಯ ಎಲ್ಲಾ ಕ್ರಮಗಳನ್ನು ಕೈಗೊಳ್ಳುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

0 Comments