ಶೃಂಗೇರಿ :(ನ್ಯೂಸ್ ಮಲ್ನಾಡ್ ವರದಿ) ಶೃಂಗೇರಿ ತಾಲೂಕು ಕಛೇರಿಯಲ್ಲಿ 2019ರಿಂದ ಈವರೆಗೂ ವಿತರಣೆಯಾಗಿರುವ 94ಸಿ, 94ಸಿಸಿ ಹಕ್ಕುಪತ್ರ ಅಧೀಕೃತವೇ ಅಥವಾ ಅನಧಿಕೃತವೇ ತನಿಖೆ ನಡೆಸಿ ಎಂದು ಸಾಮಾಜಿಕ ಕಾರ್ಯಕರ್ತ ಹಾಗೂ ಮರ್ಕಲ್ ಗ್ರಾಮ ಪಂಚಾಯಿತಿ ಸದಸ್ಯರಾದ ಪ್ರಶಾಂತ್. ಕೆ ದೂರು ನೀಡಿದ್ದಾರೆ.

ಈಗಾಗಲೇ ಶೃಂಗೇರಿ ತಾಲೂಕು ಕಛೇರಿಯಿಂದ ವಿತಣೆಯಾಗಿರುವ ಹಕ್ಕುಪತ್ರಗಳು 9 ಗ್ರಾಮ ಪಂಚಾಯಿತಿಗಳಿಗೆ ಈ ಸ್ವತ್ತು ದಾಖಲಿಸಲು ನೀಡಿರುತ್ತಾರೆ, ಆದರೆ 94ಸಿ, 94ಸಿಸಿ ಅರ್ಜಿಗಳ ವಿಲೇವಾರಿ ಸಂಬಂಧ ಈ ವರೆಗೂ ಗ್ರಾಮ ಪಂಚಾಯಿತಿ ಪ್ರಕಟಣಾ ಫಲಕದಲ್ಲಿ ಪ್ರಕಟಿಸಿರಿವುದಿಲ್ಲ.

ಹಾಗೂ ದಿನಾಂಕ. 17.11.2021ರಂದು ಕಿಗ್ಗಾ ಹೋಬಳಿ ರಾಜಸ್ವ ನಿರೀಕ್ಷಕರು ತಮ್ಮ ಸಹಿಗಳನ್ನು ಗ್ರಾಮ ಲೆಕ್ಕಾಧಿಕಾರಿ ಸತೀಶ್ ಪೋರ್ಜರಿ ಮಾಡಿದ್ದಾರೆ ಎಂದು ತಮ್ಮ ದೂರಿನಲ್ಲಿ ತಿಳಿಸಿದ್ದರು.

ಹಾಗೂ ದಿನಾಂಕ 06.12.2021ರಂದು ತಹಸೀಲ್ದಾರ್ ಅವರು 94ಸಿ ಅಡಿಯಲ್ಲಿ ಹಕ್ಕು ಪತ್ರ ಪಡೆದ ಪ್ರಕರಣಗಳಲ್ಲಿ ಇ ಸ್ವತ್ತು ಮಾಡುವ ಮುನ್ನ ವಿತರಣೆ ವಹಿ ನಕಲನ್ನು ಪಡೆಯದೇ ಇ ಸ್ವತ್ತು ಮಾಡಬಾರದೆಂದು ಸೂಚಿಸಿರುತ್ತಾರೆ, ಅಲ್ಲದೇ ವಿಧಾನ ಪರಿಷತ್ ಚುನಾವಣೆ ನೀತಿಸಂಹಿತೆ ಅವಧಿಯಲ್ಲಿ ಯಾವುದೇ ಹಕ್ಕು ಪತ್ರ ವಿತರಿಸಿರುವುದಿಲ್ಲ ಎಂದು ತಿಳಿಸಿರುತ್ತಾರೆ ಈ ಅವಧಿಯಲ್ಲಿ ಹಕ್ಕು ಪತ್ರ ಕಂಡುಬಂದಲ್ಲಿ ಕಛೇರಿಗೆ ಮಾಹಿತಿ ನೀಡುವಂತೆ ಕೋರಿದ್ದಾರೆ. ಆದಕಾರಣ ಇದುವರೆಗೂ ವಿತರಿಸಿರುವ ಹಕ್ಕುಪತ್ರಗಳು ಅಸಲಿಯೋ ಅಥವಾ ನಕಲಿಯೋ, ನಕಲಿ ವಿತರಿಸಿದ್ದರೆ ಅದನ್ನು ವಿತರಿಸಿದವರು ಯಾರು ಎಂಬುದನ್ನು ಸೂಕ್ತ ತನಿಖೆ ನಡೆಸಿ ಕ್ರಮ ಕೈಗೊಳ್ಳಬೇಕು ಎಂದು ತಮ್ಮ ದೂರಿನಲ್ಲಿ ಪ್ರಶಾಂತ್ ಒತ್ತಾಯಿಸಿದ್ದಾರೆ.