ಶಿವಮೊಗ್ಗ :(ನ್ಯೂಸ್ ಮಲ್ನಾಡ್ ವರದಿ) ಮತಾಂತರ ನಿಷೇಧ ಕಾಯ್ದೆಗೆ ಯಾರೇ ಅಡ್ಡಿಪಡಿಸಿದರೂ ಕೂಡ ಬಲವಾದ ಕಾಯ್ದೆಯನ್ನು ಜಾರಿಗೆ ತಂದೇ ತರುತ್ತೇವೆಂದು ಶಿವಮೊಗ್ಗದಲ್ಲಿ ಮಾಜಿ ಮುಖ್ಯಮಂತ್ರಿಗಳಾದ ಬಿಎಸ್ ಯಡಿಯೂರಪ್ಪನವರು ಗುಡುಗಿದ್ದಾರೆ.

ಮತಾಂತರದ ನಿಷೇಧದ ಕುರಿತಾಗಿ ರಾಜ್ಯ ಸರ್ಕಾರವೂ ಗಂಭೀರವಾಗಿ ಚಿಂತನೆ ನಡೆಸುತ್ತಿದ್ದು ಮುಂದಿನ ದಿನಗಳಲ್ಲಿ ಮತಾಂತರದ ವಿರುದ್ಧವಾಗಿ ಕಾಯ್ದೆ ಜಾರಿಯಾಗಲಿದೆ. ಈ ಕಾಯ್ದೆಯನ್ನು ತರಲು ಕಾಂಗ್ರೆಸ್ಸಿಗರು ಅಡ್ಡಗಾಲು ಹಾಕುತ್ತಿದ್ದಾರೆ ಯಾವುದೇ ವಿರೋಧ ಗಳಿಗೂ ಬಗ್ಗದೆ ಬಲವಾದ ಕಾಯ್ದೆಯು ರಾಜ್ಯದಲ್ಲಿ ಜಾರಿಯಾಗಲಿದೆ ಎಂದು ತಿಳಿಸಿದರು.

ಮತಾಂತರವು ಬಹಳಷ್ಟು ಜನರ ಬದುಕನ್ನೇ ದಿಕ್ಕಾಪಾಲಾಗಿಸಿದೆ ಎಷ್ಟೋ ಜನರು ಈ ಸುಳಿಗೆ ಸಿಲುಕಿ ತಮ್ಮ ಧರ್ಮವನ್ನೇ ಕಳೆದುಕೊಂಡು ಯಾವುದೋ ಆಮಿಷಗಳಿಗೆ ಒಳಗಾಗಿ ಮತಾಂತರಕ್ಕೆ ಬಲಿಯಾಗಿದ್ದಾರೆ. ಮುಂದಿನ ದಿನಗಳಲ್ಲಿ ಈ ರೀತಿಯಾದ ಮತಾಂತರದ ಬೆಳವಣಿಗೆಗಳು ನಡೆಯದೆ ರಾಜ್ಯದ ಜನರ ಭಾವನೆಗಳಿಗೆ ಧಕ್ಕೆಯಾಗದಂತೆ ಉತ್ತಮವಾದ ಕಾಯ್ದೆ ಶೀಘ್ರದಲ್ಲೇ ಜಾರಿಯಾಗಲಿದೆ ಎಂದರು.

ಕಾಂಗ್ರೆಸ್ಸಿಗರು ಪ್ರತಿಯೊಂದನ್ನು ವಿರೋಧಿಸಿಕೊಂಡು ಬರುತ್ತಿದ್ದಾರೆ, ಮತಾಂತರದ ವಿರುದ್ಧ ವಾಗಿ ಜಾರಿಗೆ ಬರುವ ಕಾಯ್ದೆಯ ಕುರಿತಾಗಿ ಆಲೋಚಿಸುತ್ತಿಲ್ಲ, ಇಷ್ಟೇ ವಿರೋಧವನ್ನು ಮಾಡಿದರು ಕೂಡ ಮತಾಂತರದ ವಿರುದ್ಧ ಕಾನೂನು ಶೀಘ್ರವೇ ಜಾರಿಯಾಗಲಿದೆ ಎಂದು ಬಿಎಸ್ ಯಡಿಯೂರಪ್ಪ ತಿಳಿಸಿದರು.