ಶೃಂಗೇರಿ : (ನ್ಯೂಸ್ ಮಲ್ನಾಡ್ ವರದಿ) ಮೂರು ದಿನಗಳ ಹಿಂದೆ ಹೆಲಿಕಾಪ್ಟರ್ ದುರಂತದಲ್ಲಿ ಸಾವನ್ನಪ್ಪಿದ ಸಿಡಿಎಸ್ ಜನರಲ್ ಬಿಪಿನ್ ರಾವತ್ ಹಾಗೂ ಅವರೊಂದಿಗೆ ಪ್ರಾಣ ಕಳೆದುಕೊಂಡ ಇತರ ಸೈನಿಕರಿಗೆ ನೆಮ್ಮಾರು ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಹಳೇ ವಿದ್ಯಾರ್ಥಿಗಳ ಸಂಘದ ವತಿಯಿಂದ ಶ್ರದ್ಧಾಂಜಲಿ ಸಭೆ ನಡೆಯಿತು.
ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ತಾಲೂಕಿನ ಸರ್ಕಾರಿ ಪದವಿಪೂರ್ವ ಕಾಲೇಜು ಪ್ರೌಢಶಾಲಾ ವಿಭಾಗ ನೆಮ್ಮಾರಿನಲ್ಲಿ ಹಿರಿಯ ವಿಧ್ಯಾರ್ಥಿಗಳ ಸಂಘದ ವತಿಯಿಂದ ಹೆಲಿಕಾಪ್ಟರ್ ಪತನದಲ್ಲಿ ಮಡಿದ ಸಿಡಿಎಸ್ ಜನರಲ್ ಬಿಪಿನ್ ರಾವತ್ ಹಾಗೂ ಇತರ ಸೈನಿಕರಿಗೆ ಹಾಗೂ ಇತ್ತೀಚೆಗೆ ನಿಧನರಾದ ಶೃಂಗೇರಿಯ ಶ್ರೀಯುತ ದಿಡಿಗೆಮಕ್ಕಿ ರಮೇಶ್ ರವರಿಗೆ ಸಂತಾಪ ಸೂಚಿಸಿ ಶ್ರದ್ಧಾಂಜಲಿ ಸಲ್ಲಿಸಲಾಯಿತು. ನಂತರದಲ್ಲಿ ಮಕ್ಕಳಿಗೆ ಉಚಿತ ಆರೋಗ್ಯ ತಪಾಸಣೆ ಹಾಗೂ ಔಷಧ ವಿತರಿಸುವ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದಲ್ಲಿ ಖ್ಯಾತ ಮಕ್ಕಳ ವೈದ್ಯರಾದ ಶ್ರೀಯುತ ರವೀಶ್ ಕಾಮತ್ ಮಾತನಾಡಿ ಮಕ್ಕಳ ಆರೋಗ್ಯ ಮುಖ್ಯವಾಗಿದ್ದು ಮಕ್ಕಳು ಸಮಾಜಕ್ಕೆ ಆಸ್ತಿಯಾಗಬೇಕು, ಉತ್ತಮ ಆದರ್ಶಗಳನ್ನು ಬದುಕಿನಲ್ಲಿ ಅಳವಡಿಸಿಕೊಂಡು ಮಾದರಿಯಾದಾಗ ಉತ್ತಮ ಸಮಾಜ ನಿರ್ಮಿಸಲು ಸಾದ್ಯ ಎಂದರು. ದೇಶದ ಸೈನಿಕರ ಬಲಿದಾನಗಳು ಯುವ ಜನತೆಗೆ ಪ್ರೇರಣೆಯಾಗಬೇಕು, ಡಿಸೆಂಬರ್ 08 ದೇಶದ ಪಾಲಿಗೆ ಕರಾಳ ದಿನವಾಗಿದ್ದು ಹೆಲಿಕಾಪ್ಟರ್ ದುರಂತದಲ್ಲಿ ಮಡಿದ ಮೇಜರ್ ಬಿಪಿನ್ ರಾವತ್ ಹಾಗೂ ಮಡಿದ ಇತರ ಅಧಿಕಾರಿಗಳನ್ನ ಕಳೆದುಕೊಂಡಿದ್ದು ಅತ್ಯಂತ ದುಃಖಕರ ಸಂಗತಿ, ದೇಶದ ಭದ್ರತೆಯ ದೃಷ್ಟಿಯಲ್ಲಿ ಮೇಜರ್ ಬಿಪಿನ್ ರಾವತ್ ರ ಸಾಧನೆ ಅಪಾರವಾದದ್ದು ಎಂದರು.
ಹಳೇ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷರಾದ ಮಣಿಕಂಠರವರು ಮಾತನಾಡಿ ಮಕ್ಕಳ ಹಿತ ದೃಷ್ಟಿ ಹಾಗೂ ಶಾಲೆಯ ಬೆಳವಣಿಗೆಗೆ ಅನೇಕ ಯೋಜನೆಗಳನ್ನ ಹಮ್ಮಿಕೊಂಡಿದ್ದು ಹಿರಿಯ ವಿದ್ಯಾರ್ಥಿಗಳ ಸಲಹೆ ಹಾಗೂ ಸಹಕಾರ ಶಾಲೆಯ ಬೆಳವಣಿಗೆಗೆ ಅಗತ್ಯವಿದೆ ಎಂದರು.
ಈ ಶ್ರದ್ಧಾಂಜಲಿ ಸಭೆಯಲ್ಲಿ ಉಷಾ ರವೀಶ್ ಕಾಮತ್, ಮುಖ್ಯೋಪದ್ಯಾಯರಾದ ಶ್ರೀಯುತ ಮಂಜುನಾಥ ಗೌಡ, ಹಿರಿಯ ವಿಧ್ಯಾರ್ಥಿಗಳ ಸಂಘದ ಅದ್ಯಕ್ಷರಾದ ಮಣಿಕಂಠ,ಉಪಾಧ್ಯಕ್ಷರಾದ ಗಣಪತಿ, ಪ್ರಧಾನ ಕಾರ್ಯದರ್ಶಿ ಶೋಭಿತ್, ಸಹ ಕಾರ್ಯದರ್ಶಿ ರಹಸ್ಯ, ಖಜಾಂಜಿ ಶಶಾಂಕ, ಸಂಜಯ,ಸೃಜನ್,ಸುಜಿತ್, ಅಕ್ಷರ, ರಮ್ಯ ಮತ್ತಿತರರು ಭಾಗವಹಿಸಿದ್ದರು.

0 Comments