ಹಾಸನ :(ನ್ಯೂಸ್ ಮಲ್ನಾಡ್ ವರದಿ) ಅತ್ಯಂತ ಕಡು ಬಡತನದಲ್ಲಿರುವ ಕುಟುಂಬವೊಂದರ ಹಸುಗೂಸಿಗೆ ಭಗವಂತನು ಸಂಕಷ್ಟ ತಂದಿಟ್ಟ ದಾರುಣ ಸ್ಥಿತಿಯನ್ನು ಅರೇಹಳ್ಳಿಯ ಕುಟುಂಬವೊಂದು ಎದುರಿಸುತ್ತಿದೆ.
ಹಾಸನ ಜಿಲ್ಲೆಯ ಬೇಲೂರು ತಾಲ್ಲೂಕಿನ ಅರೆಹಳ್ಳಿ ಹೋಬಳಿಯ ಲಿಂಗಾಪುರ ಗ್ರಾಮದ ಪ್ರಕಾಶ್ ಮತ್ತು ಲತಾ ಎಂಬ ದಂಪತಿಗೆ ಇಬ್ಬರು ಮಕ್ಕಳು, ಕಡುಬಡತನದಲ್ಲಿರುವ ದಂಪತಿಗಳು ಬೆಂಗಳೂರಿನ ಗಾರ್ಮೆಂಟ್ಸ್ ಒಂದರಲ್ಲಿ ಕೆಲಸ ಮಾಡುತ್ತಿದ್ದಾರೆ. ಈ ದಂಪತಿಗಳ ಎರಡನೇ ಮಗು ಕೃತಿಕಾ ಲ್ಯುಕೊಮಿಯ ಖಾಯಿಲೆಯಿಂದ ಬಳಲುತ್ತಿದ್ದಾಳೆ. ಮಗುವಿನ ಕಾಯಿಲೆಯನ್ನು ಗುಣಪಡಿಸಲು ಹೆಚ್ಚಿನ ಹಣದ ಅವಶ್ಯಕತೆಯಿದೆ ಎಂದು ಪೋಷಕರು ತಿಳಿಸಿದ್ದಾರೆ.
ಹೆಚ್ಚಿನ ಆದಾಯವನ್ನು ಹೊಂದಿರದ ಈ ಕುಟುಂಬ ಸಹಾಯ ಹಸ್ತ ಬಯಸಿದೆ, ಮಗುವಿಗೆ ಚಿಕಿತ್ಸೆ ನೀಡಲು 12ಲಕ್ಷ ಗಳ ಅವಶ್ಯಕತೆ ಇದೆ ಎಂದು ವೈದ್ಯರು ತಿಳಿಸಿದ್ದಾರೆ, ಆದರೆ ಪೋಷಕರ ಬಳಿ ಅಷ್ಟೊಂದು ಹಣ ಇಲ್ಲದ ಕಾರಣ ಸಹಾಯ ಕೋರಿ ಮನವಿ ಮಾಡುತ್ತಿದ್ದಾರೆ. ಮಗುವಿನ ಆರೋಗ್ಯವನ್ನು ಮರಳಿ ಉತ್ತಮ ಸ್ಥಿತಿಗೆ ತಲುಪಿಸಲು ಸಹಾಯ ಮಾಡಬೇಕೆಂದು ಪೋಷಕರು ಕೋರಿದ್ದಾರೆ.
ಆ ಪುಟ್ಟ ಮಗುವಿಗೆ ಸಹಾಯ ಮಾಡಲು ಇಚ್ಛಿಸುವವರು ಈ ಕೆಳಗಿನ ಅಕೌಂಟ್ ಗೆ ಹಣ ಪಾವತಿ ಮಾಡಬಹುದು :
Accountc No : 4412971989
IFSC CODE : KKBK0008066
BRANCH.220 ground floor MG ROAD Bangalore.
A/c holder name latha(ಕೃತಿಕಾಳ ತಾಯಿ)

0 Comments