ಮೂಡಿಗೆರೆ :(ನ್ಯೂಸ್ ಮಲ್ನಾಡ್ ವರದಿ) ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಬಣಕಲ್ ಬ್ರಾಂಚ್ ನ ನೂತನ ಕಛೇರಿ ಉದ್ಘಾಟನೆ ಕಾರ್ಯಕ್ರಮವು ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಬಣಕಲ್ ಇಂದಿರಾನಗರದಲ್ಲಿ ನಡೆಯಿತು.

ಎಸ್ ಡಿ ಪಿ ಐ ರಾಷ್ಟ್ರೀಯ ಕಾರ್ಯದರ್ಶಿ ರಿಯಾಝ್ ಫರಂಗಿಪೇಟೆ  ಕಛೇರಿಯನ್ನು ಉದ್ಘಾಟನೆ ಮಾಡಿದರು. ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಸ್ ಡಿ ಪಿ ಐ ಬಣಕಲ್ ಬ್ರಾಂಚ್ ಅಧ್ಯಕ್ಷರಾದ ರಫೀಕ್ ಬಣಕಲ್ ವಹಿಸಿಕೊಂಡಿದ್ದರು.

ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಎಸ್ ಡಿ ಪಿ ಐ ಜಿಲ್ಲಾ ಅಧ್ಯಕ್ಷ ಗೌಸ್ ಮುನೀರ್, ಜಾತ್ಯತೀತ ಮತ್ತು ಪ್ರಜಾಪ್ರಭುತ್ವ ನೆಲೆಯನ್ನು ಗಟ್ಟಿಗೊಳಿಸಲು ಎಸ್ ಡಿ ಪಿ ಐ ಪಕ್ಷದೊಂದಿಗೆ ದೃಢವಾಗಿನಿಲ್ಲಬೇಕೆಂದು ಹೇಳಿದರು.

ಎಸ್ ಡಿ ಪಿ ಐ ರಾಷ್ಟ್ರೀಯ ಕಾರ್ಯದರ್ಶಿ ರಿಯಾಝ್ ಫರಂಗಿಪೇಟೆ ಮಾತನಾಡಿ ಪ್ರಸಕ್ತ ದೇಶದ ಪರಿಸ್ಥಿತಿ ಮತ್ತು ಎಸ್ ಡಿ ಪಿ ಐ ಪಕ್ಷದ ಅಗತ್ಯತೆಯ ಬಗ್ಗೆ ಸವಿಸ್ತಾರವಾಗಿ ವಿವರಿಸಿದರು. ರಾಜ್ಯ ಸಮಿತಿ ಸದಸ್ಯರಾದ ರಿಯಾಝ್ ಕಡಂಬು ರವರು ಪ್ರಾಸ್ತಾವಿಕವಾಗಿ ಮಾತನಾಡಿದರು.

ಕಾರ್ಯಕ್ರಮದಲ್ಲಿ  ಎಸ್ ಡಿ ಪಿ ಐ ಚಿಕ್ಕಮಗಳೂರು ಜಿಲ್ಲಾ ಕೋಶಾಧಿಕಾರಿ ಕೆ.ಪಿ ಖಾಲಿದ್,  ಎಸ್ ಡಿ ಪಿ ಐ ಮುಖಂಡರಾದ ಅಬೂಬಕ್ಕರ್ ಮದ್ದ, ಪಿಎಫ್ಐ ಮೂಡಿಗೆರೆ ವಲಯ ಅಧ್ಯಕ್ಷರಾದ ಅಮ್ಜದ್ ಖಾನ್, ಕಾರ್ಯದರ್ಶಿ ಹಸೈನಾರ್, ಪಿಎಫ್ಐ ಬಣಕಲ್ ಘಟಕ ಅಧ್ಯಕ್ಷರಾದ ಆತೀಫ್ ಬಣಕಲ್, ಕಾರ್ಯದರ್ಶಿ ಫಯಾಝ್ ಉಪಸ್ಥಿತರಿದ್ದರು.