ಕೊಟ್ಟಿಗೆಹಾರ : ಡಿಸೆಂಬರ್ 27 ರಂದು ನಡೆದ ತರುವೆ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳು ಗೆಲುವು ಸಾಧಿಸುವ ಮೂಲಕ ಪಂಚಾಯಿತಿಯ ಆಡಳಿತಕ್ಕೆ ಸಜ್ಜಾಗಿದ್ದಾರೆ.

ತರುವೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಿನ್ನಡಿ ಮತಗಟ್ಟೆಯಲ್ಲಿ ಇಬ್ಬರು ಅಭ್ಯರ್ಥಿಗಳ ನಡುವೆ ಸಮಬಲ ಕಂಡು ಬಂತು. ಚುನಾವಣೆಗೆ ಸ್ಪರ್ಧೆ ನಡೆಸಿದ್ದ ಸುಶೀಲ ಹಾಗೂ ಮೌಲ್ಯ ಎಂಬವರು ಸರಾಸರಿ 94 ಮತಗಳನ್ನು ಪಡೆದು ಸಮಬಲ ಸಾಧಿಸಿದ್ದರು ನಂತರದಲ್ಲಿ ಚೀಟಿ ಎತ್ತುವ ಮೂಲಕ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಸುಶೀಲ ವಿಜಯವನ್ನು ಸಾಧಿಸಿದರು. ತರುವೆಯ ಗ್ರಾಮ ಪಂಚಾಯಿತಿಯ 4 ಸ್ಥಾನಗಳು ಒಟ್ಟು ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳ ಪಾಲಾಗಿದ್ದು ಬಿ.ಎಂ.ಸತೀಶ್, ಎ.ಎನ್ ರಘು, ಸ್ಮಿತಾ, ಜೆಡಿಎಸ್ ಕಾಂಗ್ರೆಸ್ ಬೆಂಬಲಿತ ಸ್ವರೂಪ, ಪ್ರಶಾಂತ್ ಗೆಲುವು ಸಾಧಿಸಿದ್ದಾರೆ. 

ಬಣಕಲ್ ಗ್ರಾಮ ಪಂಚಾಯಿತಿ ಚುನಾವಣೆಯ 15 ವಾರ್ಡ್ ಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳಾದ ಮದುಕುಮಾರ್, ಅದಮ್(ಕುಟ್ಟ) ಲೀಲಾವತಿ, ಸುಜಾತ, ದಿನೇಶ್, ಇರ್ಫಾನ್, ಆತೀಖ ಬಾನು, ಝರೀನ, ವಿನಯ್ ಕುಮಾರ್ ,ಸಿರಾಜ್, ರತ್ನ, ಜಯಗಳಿಸಿದ್ದಾರೆ. 5 ವಾರ್ಡ್ ಗಳಲ್ಲಿ ಬಿ.ಜೆ.ಪಿ ಬೆಂಬಲಿತ ಅಭ್ಯರ್ಥಿಗಳಾದ ಸರೋಜ, ರೇಣುಕಾ, ಸುರೇಶ, ಸುನಿತಾ,ತಾರಾನಾಥ್ ವಿಜಯವನ್ನು ತಮ್ಮದಾಗಿಸಿಕೊಂಡಿದ್ದಾರೆ.

ವಿಜಯೋತ್ಸವ ಆಚರಿಸಿದ ಬೆಂಬಲಿಗರು : 

ಚುನಾವಣೆಯಲ್ಲಿ ಜಯಗಳಿಸಿದ ಕಾಂಗ್ರೆಸ್ ಅಭ್ಯರ್ಥಿಗಳು ತಮ್ಮ ಕಾರ್ಯಕರ್ತರ ಜೊತೆಗೆ ಕೊಟ್ಟಿಗೆಹಾರದ ಮುಖ್ಯ ರಸ್ತೆಗಳಲ್ಲಿ ಮೆರವಣಿಗೆ ನಡೆಸಿ ಪಟಾಕಿ ಸಿಡಿಸಿ . ಪಕ್ಷದ ಹಾಗೂ ಅಭ್ಯರ್ಥಿಗಳ ಪರವಾದ ಜಯಕಾರಗಳನ್ನು ಕೂಗುತ್ತಾ ಅದ್ಧೂರಿ ಮೆರವಣಿಗೆ ನಡೆಸಿದರು.

ತನು ಕೊಟ್ಟಿಗೆಹಾರ, ವರದಿಗಾರರು.