ಚಿಕ್ಕಮಗಳೂರು :(ನ್ಯೂಸ್ ಮಲ್ನಾಡ್ ವರದಿ) ಜಿಲ್ಲೆಯಾದ್ಯಂತ ದತ್ತ ಜಯಂತಿಯ ಅಂಗವಾಗಿ ಬೃಹತ್ ಶೋಭಾಯಾತ್ರೆಗಳು ಹಾಗೂ ಧಾರ್ಮಿಕ ಸಭೆಗಳು ನಡೆಯುತ್ತಿರುವ ಈ ಸಂದರ್ಭದಲ್ಲಿ ಇಂದು ಅನುಸೂಯಾ ಜಯಂತಿಯ ಅಂಗವಾಗಿ ಜಿಲ್ಲೆಯ ವಿವಿಧ ಕಡೆಗಳಿಂದ ಮಹಿಳೆಯರು ಗುರು ದತ್ತಾತ್ರೇಯ ಪೀಠಕ್ಕೆ ತೆರಳಿದ್ದಾರೆ.
ಇಂದು ಬೆಳಗ್ಗಿನಿಂದಲೇ ಹಲವಾರು ಜಿಲ್ಲೆಗಳಿಂದ ಮಹಿಳೆಯರು ದತ್ತ ಪೀಠಕ್ಕೆ ತೆರಳಿ ಅನುಸೂಯ ಜಯಂತಿಯ ಅಂಗವಾಗಿ ದತ್ತ ಪಾದುಕೆಗಳ ಹಾಗೂ ಅನುಸೂಯಾ ದೇವಿಯ ದರ್ಶನವನ್ನು ಪಡೆದರು. ಘೋಷಣೆಗಳನ್ನು ಕೂಗುತ್ತಾ, ಭಜನೆಗಳನ್ನು ಮಾಡುತ್ತಾ ಚಿಕ್ಕಮಗಳೂರಿನ ದತ್ತಾತ್ರೇಯ ಪೀಠದ ಗುಹೆಯನ್ನು ಪ್ರವೇಶಿಸಿ ಪಾದುಕೆಗಳ ದರ್ಶನವನ್ನು ಪಡೆದರು.
ಡಿಸೆಂಬರ್ 19 ರಂದು ದತ್ತ ಜಯಂತಿ :
ದಿನಾಂಕ 18 ಡಿಸೆಂಬರ್ ರಂದು ಚಿಕ್ಕಮಗಳೂರು ನಗರ ಭಾಗದಲ್ಲಿ ದತ್ತ ಭಕ್ತರಿಂದ ಬೃಹತ್ ಶೋಭಾಯಾತ್ರೆ ನಡೆಯಲಿದ್ದು ಭದ್ರತೆಯ ದೃಷ್ಟಿಯಿಂದ ಹಾಗೂ ಯಾವುದೇ ಅಹಿತಕರ ಘಟನೆಗಳು ಉಂಟಾಗದಂತೆ ಚಿಕ್ಕಮಗಳೂರಿನಾದ್ಯಂತ ಬಿಗಿ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿದೆ. ಡಿಸೆಂಬರ್ 19 ರ ಭಾನುವಾರದಂದು ಅತೀ ಹೆಚ್ಚಿನ ಸಂಖ್ಯೆಯಲ್ಲಿ ದತ್ತ ಮಾಲಧಾರಿಗಳು ದತ್ತ ಪೀಠಕ್ಕೆ ಆಗಮಿಸುವ ನಿರೀಕ್ಷೆಯಿದೆ ಎಂಬ ಮಾಹಿತಿ ಲಭ್ಯವಾಗಿದೆ.

0 Comments