ಬಹಳ ಕಡಿಮೆ ಅಂತರ ಗಳಿಂದ ಎಂಕೆ ಪ್ರಾಣೇಶ್ ಅವರು ಕೆಲವು ಸಾಧಿಸಿದ್ದರು, ಈ ಕುರಿತಾಗಿ ಬಿಜೆಪಿಯ ಜಿಲ್ಲಾಧ್ಯಕ್ಷರಾದ ಕಲ್ಮರುಡಪ್ಪ ಹಾಗೂ ಜಿಲ್ಲೆಯ ಇತರ ಮುಖಂಡರು ಸಭೆ ನಡೆಸಿ ಈ ಕುರಿತಾಗಿ ಅವಲೋಕನ ನಡೆಸಿದಾಗ ಕೆಲ ಪಕ್ಷದಲ್ಲಿರುವ ಮುಖಂಡರುಗಳು ಎಂಕೆ ಪ್ರಾಣೇಶ್ ಅವರ ಅಭಿವೃದ್ಧಿ ಅಪಪ್ರಚಾರ ಮಾಡಿರುವುದು ತಿಳಿದುಬಂದಿದೆ.
ಬಿಜೆಪಿಯ ಜಿಲ್ಲಾ ಉಪಾಧ್ಯಕ್ಷ ಎಂಎಸ್ ನಿರಂಜನ್, ಜಿಲ್ಲಾ ರೈತ ಮೋರ್ಚಾದ ಕಾರ್ಯದರ್ಶಿ ಗಿರೀಶ್ ಹಾಗೂ ಎಸ್ಸಿ ಮೋರ್ಚಾದ ಕಾರ್ಯದರ್ಶಿ ಗಿರೀಶ್ ಹೆಸಗಲ್ ಇವರುಗಳು ಬಿಜೆಪಿಯ ಜವಾಬ್ದಾರಿಯನ್ನು ಹೊಂದಿ ಪಕ್ಷದ ವಿರುದ್ಧವಾಗಿ ಕೆಲಸ ಮಾಡಿರುವುದು ಬೆಳಕಿಗೆ ಬಂದ ನಂತರದಲ್ಲಿ ಜಿಲ್ಲಾಧ್ಯಕ್ಷರಾದ ಕಲ್ಮರುಡಪ್ಪ ಇವರುಗಳನ್ನು ಪಕ್ಷದ ಜವಾಬ್ದಾರಿಯಿಂದ ಕೆಳಗಿಳಿಸಿದ್ದಾರೆ ಎಂದು ತಿಳಿಸಿದ್ದಾರೆ.
ಬಿಜೆಪಿಯು ಮಾತೃ ಸಮಾನವಾದ ಪಕ್ಷ, ಪಕ್ಷದಲ್ಲಿದ್ದುಕೊಂಡು ದ್ರೋಹ ಬಗೆಯುವವರನ್ನು ಬಿಜೆಪಿ ಎಂದಿಗೂ ಸಹಿಸುವುದಿಲ್ಲ. ತಕ್ಷಣವೇ ಜಾರಿಗೆ ಬರುವಂತೆ ಈ ಮೂವರನ್ನು ಪಕ್ಷದ ಜವಾಬ್ದಾರಿಗಳಿಂದ ಕೆಳಗಿಳಿಸಲಾಗಿದೆ, ಯಾರೇ ಈ ರೀತಿಯ ಕೃತ್ಯಗಳನ್ನು ಎಸಗಿದರೂ ಕೂಡ ಅವರ ಮೇಲೆ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಲಾಗುವುದು ಎಂದು ಬಿಜೆಪಿಯ ಜಿಲ್ಲಾಧ್ಯಕ್ಷ ಕಲ್ಮರುಡಪ್ಪ ತಿಳಿಸಿದ್ದಾರೆ.

0 Comments