ಹಾಸನ : (ನ್ಯೂಸ್ ಮಲ್ನಾಡ್ ವರದಿ) ಹಾಸನ ಹೊರವಲಯದ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದ ಭಾರಿ ಅಪಘಾತದಲ್ಲಿ ಮೂವರು ಮೃತಪಟ್ಟಿದ್ದಾರೆ.
ಮದ್ಯಪಾನವನ್ನು ಮಾಡಿಕೊಂಡು ಲಾರಿಯನ್ನು ವೇಗವಾಗಿ ಚಲಾಯಿಸುತ್ತಿದ್ದ ಚಾಲಕ 3 ಬೈಕ್ ಗಳಿಗೆ ವೇಗವಾಗಿ ಗುದ್ದಿ ಅಪಘಾತಕ್ಕೀಡುಮಾಡಿದ್ದಾನೆ. ಈ ಅಪಘಾತವು ಬೂವನಹಳ್ಳಿ ಬಳಿಯ ರಾಷ್ಟ್ರೀಯ ಹೆದ್ದಾರಿ ರಿಂಗ್ ರಸ್ತೆಯಲ್ಲಿ ನಡೆದಿದೆ. ಅಪಘಾತವಾದ ತಕ್ಷಣ ಪ್ರಕರಣ ಮುಚ್ಚಿ ಹಾಕುವ ಉದ್ಧೇಶದಿಂದ ಲಾರಿಯ ಚಕ್ರಕ್ಕೆ ಸಿಲುಕಿಕೊಂಡಿದ್ದ ಪುಟ್ಟ ಮಗು ಹಾಗೂ ಬೈಕಿನ ಸಮೇತ ಲಾರಿ ಚಾಲಕನು ಸ್ಥಳದಿಂದ ಪರಾರಿಯಾಗಿದ್ದಾನೆ. ಕೂಡಲೇ ಬೆನ್ನಟ್ಟಿದ ಸ್ಥಳೀಯರು ಲಾರಿ ಚಾಲಕನನ್ನು ಹಿಡಿದಿದ್ದಾರೆ.
ಈ ಅಪಘಾತದಲ್ಲಿ ಗವೇನಹಳ್ಳಿಯ ಶಿವಾನಂದ್ ಎಂಬುವವರ ಕುಟುಂಬದವರು ಬೈಕ್ನಲ್ಲಿ ಸಂಚರಿಸುತ್ತಿದ್ದರು ಎಂದು ತಿಳಿದುಬಂದಿದೆ. ಅಪಘಾತಕ್ಕೀಡಾದವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು ಚಿಕಿತ್ಸೆ ನೀಡಲಾಗುತ್ತಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಘಟನಾ ಸ್ಥಳದಲ್ಲಿಯೇ ರಾತ್ರಿ ಇಬ್ಬರು ಪುಟ್ಟ ಮಕ್ಕಳು ಸಾವಿಗೀಡಾಗಿದ್ದರು, ಆಸ್ಪತ್ರೆಯಲ್ಲಿ ಮಕ್ಕಳ ತಾಯಿ ಕೂಡ ಮರಣ ಹೊಂದಿದ್ದಾರೆ ಎಂದು ತಿಳಿದುಬಂದಿದೆ. ಘಟನೆಯ ಕುರಿತಾಗಿ ಹಾಸನ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

0 Comments