ಚಿಕ್ಕಮಗಳೂರು : (ನ್ಯೂಸ್ ಮಲ್ನಾಡ್ ವರದಿ) ಇಷ್ಟು ದಿನಗಳ ಕಾಲ ರಂಗೇರಿದ್ದ ಚಿಕ್ಕಮಗಳೂರು ನಗರಸಭಾ ಚುನಾವಣೆಯು ಶಾಂತಿಯುತ ಮತದಾನ ಪ್ರಕ್ರಿಯೆಯಿಂದ ಇಂದು ಸಂಜೆಗೆ ಮುಗಿದಿದೆ. ಕಳೆದ ಹಲವು ತಿಂಗಳುಗಳಿಂದ ನಡೆಯುತ್ತಿದ್ದ ಆರೋಪ-ಪ್ರತ್ಯಾರೋಪಗಳು ಇಂದಿಗೆ ಅಂತ್ಯ ಕಂಡಿದೆ ಹಾಗೂ ಅಭ್ಯರ್ಥಿಗಳ ಭವಿಷ್ಯವು ಭದ್ರವಾಗಿರಿಸಲ್ಪಟ್ಟಿದೆ.ಈ ಬಾರಿಯ ಚುನಾವಣೆಯಲ್ಲಿ ಶೇ. 60.99 ರಷ್ಟು ಮತದಾನ ನಡೆದಿದೆ.

https://chat.whatsapp.com/I2r7uKjzrF9AlSwMn2xClg

ಚಿಕ್ಕಮಗಳೂರು ನಗರದ 25 ವಾರ್ಡ್ ಗಳಿಗೆ ನಡ ಚುನಾವಣೆಗೆ 146 ಅಭ್ಯರ್ಥಿಗಳು ಅದೃಷ್ಟ ಪರೀಕ್ಷೆಗಿಳಿದಿದ್ದರು. ಕಾಂಗ್ರೆಸ್ ಜೆಡಿಎಸ್ ಬಿಜೆಪಿ ಹಾಗೂ ಪಕ್ಷೇತರರು ಅಭ್ಯರ್ಥಿಗಳಾಗಿ ಈ ಚುನಾವಣೆಗೆ ಸ್ಪರ್ಧೆ ನಡೆಸಿದ್ದರು. ಚಿಕ್ಕಮಗಳೂರು ನಗರದಲ್ಲಿ 110 ಮತಗಟ್ಟೆಗಳನ್ನು ಸ್ಥಾಪಿಸಿ ಎಲ್ಲೂ ಶಾಂತಿ ಹಾಗೂ ಸುವ್ಯವಸ್ಥೆಗೆ ಭಂಗವಾಗದಂತೆ ಜಿಲ್ಲಾಡಳಿತ ಸುವ್ಯವಸ್ಥೆ ಕಲ್ಪಿಸಿತ್ತು. ಮತದಾರರು ತಮ್ಮ ವಾರ್ಡ್ಗಳಲ್ಲಿ ಕಲ್ಪಿಸಲಾಗಿದ್ದು ಮತಗಟ್ಟೆಗೆ ತೆರಳಿ ಸರತಿ ಸಾಲಿನಲ್ಲಿ ನಿಂತು ಮತ ಚಲಾಯಿಸಿದರು.

ಬೆಳಗ್ಗೆ 7 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ಮತದಾನಕ್ಕೆ ಅವಕಾಶ ನೀಡಲಾಗಿತ್ತು. ಆರಂಭದಲ್ಲಿ ನಿಧಾನಗತಿಯಲ್ಲಿ ಸಾಗಿದ ಮತದಾನವು ನಂತರದಲ್ಲಿ ಬಿರುಸಿನಿಂದ ಸಾಗಿತು. ಕೆಲ ಗೊಂದಲಗಳಿಂದಾಗಿ ಮತದಾರರು ಬೇರೆ ಬೇರೆ ಮತ ಕೇಂದ್ರಗಳಿಗೆ ಅಲೆಯುವ ದೃಶ್ಯಾವಳಿಗಳು ಕಂಡು ಬಂತು.

ಒಟ್ಟಿನಲ್ಲಿ ಇಷ್ಟು ದಿನಗಳ ಕಾಲ ಪ್ರಚಾರದ ಅಬ್ಬರದಲ್ಲಿ ಆಯಾಸದಿಂದಿರುತ್ತಿದ್ದ ಎಲ್ಲಾ ಪಕ್ಷಗಳ ನಾಯಕರು ಹಾಗೂ ಬೆಂಬಲಿಗರು ಇಂದು ನಿರಾಯಾಸವಾಗಿ ತಮ್ಮ ಮನೆಗಳಲ್ಲಿ ಇರುವಂತೆ ವಾತಾವರಣ ನಿರ್ಮಾಣವಾಗಿದೆ. ಇನ್ನೆರಡು ದಿನಗಳಲ್ಲಿ ಅಭ್ಯರ್ಥಿಗಳ ಅದೃಷ್ಟ ಗೋಚರವಾಗುತ್ತದೆ. ಅತಿ ಹೆಚ್ಚು ಸದಸ್ಯರನ್ನು ಹೊಂದಿ ನಗರಸಭೆಯು ಯಾರ ತೆಕ್ಕೆಗೆ ಲಭ್ಯವಾಗಲಿದೆ ಎಂದು ಕಾದು ನೋಡಬೇಕಿದೆ.