ಚಿಕ್ಕಮಗಳೂರು : ಹೃದಯಾಘಾತ ಸಂಭವಿಸಿ ಚಿಕ್ಕಮಗಳೂರು - ಉಡುಪಿ ಸರಕಾರಿ ಬಸ್ ನಿರ್ವಾಹಕನೋರ್ವ ಸಾವನ್ನಪ್ಪಿದ ಘಟನೆ ಇಂದು ಬೆಳಗ್ಗೆ ನಡೆದಿದೆ.

ಇಂದು ಬೆಳಗ್ಗೆ 6.30 ಕ್ಕೆ ಚಿಕ್ಕಮಗಳೂರಿನಿಂದ ಉಡುಪಿಗೆ ಹೊರಟಿದ್ದ ಸರ್ಕಾರಿ ಬಸ್ಸಿನಲ್ಲಿದ್ದ ನಿರ್ವಾಹಕನಿಗೆ ಚಾರ್ಮಾಡಿ ಘಾಟ್ ನ ಮಲಯ ಮಾರುತ ಬಳಿ ಚಲಿಸುವಾಗ ತೀವ್ರ ಎದೆ ನೋವು ಉಂಟಾಗಿದೆ, ನೋವಿನಿಂದ ಬಳಲಿದ ನಿರ್ವಾಹಕ ಪ್ರಯಾಣಿಕನ ಬಳಿ ನೋವನ್ನು ತಿಳಿಸಿದ್ದಾರೆ. 

ಬೆಳಗ್ಗೆ 08.15 ರ ಸುಮಾರಿಗೆ ಬಸ್ಸಿನಲ್ಲೇ ಹೃದಯಾಘಾತ ಸಂಭವಿಸಿದೆ. ಕೂಡಲೇ ಮೂಡಿಗೆರೆಯ ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿದ್ದು ಚಿಕಿತ್ಸೆ ಫಲಕಾರಿಯಾಗದೆ ಸರ್ಕಾರಿ ಆಸ್ಪತ್ರೆಯಲ್ಲಿ ನಿರ್ವಾಹಕ ಕೊನೆಯುಸಿರೆಳೆದಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಮೃತ ಹೊಂದಿದ ನಿರ್ವಾಹಕನನ್ನು ವಿಜಯ್ (43) ಎಂದು ಗುರುತಿಸಲಾಗಿದೆ.

ತನು ಕೊಟ್ಟಿಗೆಹಾರ, ವರದಿಗಾರರು