ಶೃಂಗೇರಿ : (ನ್ಯೂಸ್ ಮಲ್ನಾಡ್ ವರದಿ) ಇತ್ತೀಚೆಗಷ್ಟೇ ಕುವೆಂಪು ವಿಶ್ವ ವಿದ್ಯಾಲಯದ ವಾಲಿಬಾಲ್ ತಂಡಕ್ಕೆ ಆಯ್ಕೆ ಪ್ರಕ್ರಿಯೆ ಹಾಗೂ ಇತರ ಕ್ರೀಡಾ ಸ್ಪರ್ಧೆಗಳು ನಡೆಯಿತು. ಶೃಂಗೇರಿಯ ಜೆಸಿಬಿಎಂ ಕಾಲೇಜಿನ ವಿದ್ಯಾರ್ಥಿಗಳು ಈ ಸ್ಪರ್ಧೆಯಲ್ಲಿ ಭಾಗವಹಿಸಿ ವಾಲಿಬಾಲ್ ತಂಡಕ್ಕೆ ಆಯ್ಕೆಯಾಗಿ, ಕುಸ್ತಿ ಪಂದ್ಯಾವಳಿಯಲ್ಲಿ ಪ್ರಶಸ್ತಿ ಪಡೆದಿದ್ದಾರೆ.
ಕುವೆಂಪು ವಿಶ್ವವಿದ್ಯಾಲಯದ ಅಂತರ ಕಾಲೇಜು ಕುಸ್ತಿ ಪಂದ್ಯಾವಳಿಯ 79 ಕೆಜಿ ವಿಭಾಗದಲ್ಲಿ ತೃತೀಯ ಬಿ.ಎ ಮೋಕ್ಷ ಹಾಗೂ 74 ಕೆಜಿ ವಿಭಾಗದಲ್ಲಿ ದ್ವಿತೀಯ ಬಿ.ಎ ವಿಶ್ವನಾಥ್ ತೃತೀಯ ಸ್ಥಾನವನ್ನುಗಳಿಸಿದ್ದಾರೆ. ಜೆ.ಸಿ.ಬಿ.ಎಂ ಕಾಲೇಜಿನ ದೈಹಿಕ ಮಾರ್ಗದರ್ಶಕರಾದ ರವಿ ಕಿರಣ್ ವಿದ್ಯಾರ್ಥಿಗಳಿಗೆ ತರಬೇತಿ ನೀಡಿದ್ದಾರೆ.
ವಾಲಿಬಾಲ್ ತಂಡಕ್ಕೆ ಆಯ್ಕೆ;
ಕುವೆಂಪು ವಿಶ್ವ ವಿದ್ಯಾಲಯದ ವಾಲಿಬಾಲ್ ತಂಡದ ಆಯ್ಕೆ ಜ್ಞಾನ ಸಹ್ಯಾದ್ರಿ ಶಂಕರಘಟ್ಟದಲ್ಲಿ ನಡೆಯಿತು. ಇದರಲ್ಲಿ ಜೆ ಸಿ ಬಿ ಎಂ ಕಾಲೇಜಿನ ವಿದ್ಯಾರ್ಥಿಗಳೂ ಕೂಡ ಭಾಗವಹಿಸಿದ್ದು ದ್ವಿತೀಯ ಬಿಕಾಂನ ವಿಶ್ವಾಸ್ ಮತ್ತು ಮಹಿಳೆಯರ ವಿಭಾಗದಲ್ಲಿ ಅಪೇಕ್ಷ ತೃತೀಯ ಬಿ.ಎಸ್.ಸಿ ಮತ್ತು ಸಾನಿಯಾ ತೃತೀಯ ಬಿ.ಕಾಂ ಇವರುಗಳು ವಿಶ್ವವಿದ್ಯಾಲಯದ ತಂಡಕ್ಕೆ ಆಯ್ಕೆಯಾಗಿದ್ದಾರೆ.
ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಕಾಲೇಜಿನ ಪ್ರಾಂಶುಪಾಲರಾದ ಡಾ. ಎಂ ಸ್ವಾಮಿ, ದೈಹಿಕ ಮಾರ್ಗದರ್ಶಕರಾದ ರವಿ ಕಿರಣ್, ವಿಶ್ವಸ್ಥ ಮಂಡಳಿಯವರು ಮತ್ತು ಕಾಲೇಜಿನ ಎಲ್ಲಾ ಬೋಧಕ ಬೋಧಕೇತರ ಸಿಬ್ಬಂದಿಗಳು ಮತ್ತು ವಿದ್ಯಾರ್ಥಿಗಳು ಅಭಿನಂದನೆ ಸಲ್ಲಿಸಿದ್ದಾರೆ.

0 Comments