ಚಿಕ್ಕಮಗಳೂರು/ಮಂಗಳೂರು: (ನ್ಯೂಸ್ ಮಲ್ನಾಡ್ ವರದಿ) ಹಿಂದೂ ಯುವತಿಯೊಂದಿಗೆ ಅಸಭ್ಯ ವರ್ತನೆ ತೋರಿದ್ದಾನೆ ಎಂಬ ಆರೋಪವಿರಿಸಿ ಯುವಕನೊಬ್ಬನಿಗೆ ಹಲ್ಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳೂರು ಪೊಲೀಸರು ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ.
ಚಿಕ್ಕಮಗಳೂರು ಮೂಲದ ಸುನೈಫ್ ಕಾಲೇಜು ಮುಗಿಸಿ ರಜೆಗೆ ಮನೆಗೆ ಬರುತ್ತಿದ್ದ ವೇಳೆ ಬಸ್ಸಿನಲ್ಲಿ ಯುವತಿಯೊಂದಿಗೆ ಕುಳಿತಿದ್ದು ಇದನ್ನು ಲವ್ ಜಿಹಾದ್ ಎಂದು ಆರೋಪಿಸಿ ಸುನೈಫ್ ಮೇಲೆ ಹಲ್ಲೆ ಮಾಡಲಾಗಿತ್ತು. ಬಳಿಕ ಇಬ್ಬರ ಐಡಿ ಕಾರ್ಡ್ ನೀಡುವಂತೆ ಕೇಳಿ ಆ ವೀಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡಲಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ನಾಲ್ವರು ಆರೋಪಿಗಳನ್ನು ಬಂಧಿಸಿದ್ದು, ವಿಚಾರಣೆಗೊಳಪಡಿಸಿದ್ದಾರೆ. ಬಂಧಿತರು ಪ್ರಕಾಶ್, ರಾಘವೇಂದ್ರ, ರಂಜಿತ್ ಮತ್ತು ಪವನ್ ಎಂದು ಗುರುತಿಸಲಾಗಿದೆ.
ಯುವತಿ ಬ್ಯಾಗ್ ನೊಂದಿಗೆ ಬಂದಿದ್ದು, ಈಕೆ ಕೇರಳಕ್ಕೆ ಹೋಗಿ ಮದುವೆ ಆಗಲಿದ್ದಳು ಎಂಬು ಸುದ್ದಿಗಳು ಕೇಳಿಬಂದಿದ್ದವು. ಈ ಕುರಿತು ಸ್ವತಃ ಯುವಕ ಸುನೈಫ್ ತಂದೆಯೇ ಸ್ಪಷ್ಟನೆ ನೀಡಿದ್ದು, ಅವರಿಬ್ಬರು ಕೇರಳಕ್ಕೆ ಓಡಿಹೋಗುತ್ತಿದ್ದರು ಎನ್ನುವುದು ಸತ್ಯಕ್ಕೆ ದೂರವಾಗಿದೆ. ಅನವಷ್ಯಕವಾಗಿ ಸುಳ್ಳು ಸುದ್ದಿ ಹರಡಿ ಓರ್ವ ಹೆಣ್ಣುಮಗಳ ಜೀವನ ಹಾಳು ಮಾಡುವ ಮನಸ್ಥಿತಿಯನ್ನು ಸಂಘಟನೆಗಳು ಬಿಡಬೇಕು ಎಂದಿದ್ದಾರೆ.
ವೈರಲ್ ಆದ ವೀಡಿಯೋ ನೋಡಲು ಈ ಕೆಳಗಿನ ಲಿಂಕ್ ಒತ್ತಿ 👇
ಅವರಿಬ್ಬರು ಸ್ನೇಹಿತರಾಗಿದ್ದು, ಅವರಿಬ್ಬರು ಬಸ್ಸಿನಲ್ಲಿ ಅಸಭ್ಯ ವರ್ತನೆ ತೋರಿದ್ದಾರೆ ಎಂಬ ಆರೋಪಗಳು ಸುಳ್ಳು. ಸಂಘಟನೆಗಳು ಈ ರೀತಿ ಗೂಂಡಾಗಿರಿ ನಡೆಸಿ ಇನ್ನೊಬ್ಬರ ಮನೆಯ ಮಕ್ಕಳನ್ನು ಸಾವಿನ ಮನೆಗೆ ದೂಡುವುದನ್ನು ಬಿಡಬೇಕು. - ಇಬ್ರಾಹಿಂ, ಸುನೈಫ್ ತಂದೆ

0 Comments