ಶೃಂಗೇರಿ : (ನ್ಯೂಸ್ ಮಲ್ನಾಡ್ ವರದಿ) ಜಾತ್ಯಾತೀತ ಜನತಾದಳ ಪಕ್ಷದ ವತಿಯಿಂದ ಇಂದು ಶೃಂಗೇರಿಯಲ್ಲಿ ಯುವ ಸಂಘಟನಾ ಪರ್ವ ಕಾರ್ಯಕ್ರಮ ನಡೆಯಿತು.

ಈ ಕಾರ್ಯಕ್ರಮದಲ್ಲಿ ಮುಖ್ಯವಾಗಿ ಬೇರೆ ಬೇರೆ ಪಕ್ಷದಲ್ಲಿದ್ದ ಹಲವಾರು ಯುವಕರು ಜೆಡಿಎಸ್ ಸೇರ್ಪಡೆಗೊಂಡರು. ಕಾರ್ಯಕ್ರಮದಲ್ಲಿ ಜೆಡಿಎಸ್ ರಾಜ್ಯ ಉಪಾಧ್ಯಕ್ಷರಾದ ಸುಧಾಕರ್ ಎಸ್ ಶೆಟ್ಟಿ ಜಿಲ್ಲಾಧ್ಯಕ್ಷರಾದ ರಂಜನ್ ಅಜಿತ್ ಕುಮಾರ್, ಜೆಡಿಎಸ್ ಮುಖಂಡ ಹೆಚ್.ಜಿ ವೆಂಕಟೇಶ್, ಕ್ಷೇತ್ರಾಧ್ಯಕ್ಷ ದಿವಾಕರ್ ಭಟ್ ಸೇರಿದಂತೆ ಅನೇಕ ಜೆಡಿಎಸ್ ಮುಖಂಡರು ಹಾಗೂ ಯುವ ಕಾರ್ಯಕರ್ತರು ಹಾಜರಿದ್ದರು.

ಕಾರ್ಯಕ್ರಮದ ಕುರಿತಾಗಿ ಪ್ರಾಸ್ತಾವಿಕ ನುಡಿಗಳನ್ನಾಡಿದ ಜೆಡಿಎಸ್ ರಾಜ್ಯ ಮುಖಂಡ ಹೆಚ್.ಜಿ ವೆಂಕಟೇಶ್ ಕ್ಷೇತ್ರದಲ್ಲಿ ಜನತಾದಳದ ಕಡೆಗೆ ಮತ್ತೆ ಎಲ್ಲರಲ್ಲೂ ಒಲವು ಮಾಡುತ್ತಿದೆ, ಸಂಘಟನಾ ಪರ್ವದ ಮೊದಲನೇ ಹಂತವನ್ನು ನಾವು ಬಹಳ ಯಶಸ್ವಿ ಮಾಡಿದ್ದೇವೆ ಇದೀಗ ಎರಡನೆಯ ಹಂತಕ್ಕೆ ಯುವಕರನ್ನು ಒಗ್ಗೂಡಿಸಿ ಕಾಲಿಡುತ್ತಿದ್ದೇವೆ, ಸುಧಾಕರ ಶೆಟ್ಟಿ ಅವರು ಅತ್ಯುತ್ತಮವಾಗಿಯೇ ಕ್ಷೇತ್ರದಾದ್ಯಂತ ಪಕ್ಷದ ಉನ್ನತಿಗಾಗಿ ಹೋರಾಡುತ್ತಿದ್ದಾರೆ ಎಂದರು. ವಿವಿಧ ಪಕ್ಷಗಳಿಂದ ಜಾತ್ಯತೀತ ಜನತಾದಳ ಪಕ್ಷಕ್ಕೆ ಯುವ ಸಮೂಹ ಬಂದು ಸೇರುತ್ತಿರುವುದು ಅತ್ಯಂತ ಶ್ಲಾಘನೀಯ ಈ ಕಾರ್ಯದ ಹಿಂದಿರುವ ಶೃಂಗೇರಿ ಕ್ಷೇತ್ರದ ಜೆಡಿಎಸ್ ಪದಾಧಿಕಾರಿಗಳಿಗೆ ತುಂಬು ಹೃದಯದ ಧನ್ಯವಾದಗಳನ್ನು ತಿಳಿಸುತ್ತೇನೆ ಎಂದರು. ಮುಂಬರುವ ದಿನಗಳಲ್ಲಿ ಎಲ್ಲರೂ ಒಗ್ಗೂಡಿ ಪಕ್ಷವನ್ನು ಬಲಿಷ್ಠ ಹಾಗೂ ಸದೃಢಗೊಳಿಸೋಣ ಎಂದರು.


https://chat.whatsapp.com/I2r7uKjzrF9AlSwMn2xClg

ನಂತರ ಕಾರ್ಯಕ್ರಮದ ಕುರಿತಾಗಿ ಮಾತನಾಡಿದ ಜೆಡಿಎಸ್ ಜಿಲ್ಲಾಧ್ಯಕ್ಷ ಅಜಿತ್ ರಂಜನ್ ಕುಮಾರ್ ಅವರು ಶೃಂಗೇರಿ ಕ್ಷೇತ್ರದ ಯುವ ಜನತೆ ಹೊಸದೊಂದು ಮುನ್ನುಡಿಗೆ ಸಾಕ್ಷಿಯಾಗುತ್ತಿದ್ದಾರೆ, ಜೆಡಿಎಸ್ ಮತ್ತೊಮ್ಮೆ ಕ್ಷೇತ್ರದಲ್ಲಿ ಪ್ರಬಲವಾಗಿ ಹೊರಹೊಮ್ಮುತ್ತಿದೆ ಎಂದರು. ಈಗಾಗಲೇ ಜಿಲ್ಲಾದ್ಯಂತ ಚಾಲ್ತಿಯಲ್ಲಿರುವ ಜೆಡಿಎಸ್ ಸದಸ್ಯತ್ವ ಪ್ರಕ್ರಿಯೆಯಲ್ಲಿ ಶೃಂಗೇರಿ ವಿಧಾನಸಭಾ ಕ್ಷೇತ್ರ ಅತ್ಯಂತ ವೇಗವಾಗಿ ಮುಂದೆ ಸಾಗುತ್ತಿದೆ ಇದರ ಹಿಂದೆ ಸುಧಾಕರ್ ಶೆಟ್ಟಿ ಅವರ ಹಾಗೂ ಜೆಡಿಎಸ್ ಪದಾಧಿಕಾರಿಗಳ ಪರಿಶ್ರಮವಿದೆ ಅವರೆಲ್ಲರನ್ನೂ ಅಭಿನಂದಿಸುತ್ತೇನೆ ಎಂದರು. ಎಲ್ಲೆಡೆ ಇದೀಗ ಸುಧಾಕರ್ ಶೆಟ್ಟಿ ಅವರ ಕಾರ್ಯವೈಖರಿ ಕುರಿತಾಗಿ ಜನ ಮಾತನಾಡುತ್ತಿದ್ದಾರೆ, ಜನರ ಉತ್ತಮ ಜೀವನಕ್ಕಾಗಿ ಸುಧಾಕರ ಶೆಟ್ಟಿ ಅವರು ಅತ್ಯುತ್ತಮ ತಯಾರಿಗಳೊಂದಿಗೆ ಸ್ಪಂದಿಸುತ್ತಿದ್ದಾರೆ ಎಂದರು. 

ನಂತರ ಮಾತನಾಡಿದ ಜೆಡಿಎಸ್ ರಾಜ್ಯ ಉಪಾಧ್ಯಕ್ಷರಾದ ಸುಧಾಕರ್ ಎಸ್ ಶೆಟ್ಟಿ ಅವರು ಜನರು ಪಕ್ಷದ ಕುರಿತಾಗಿ ಹೆಚ್ಚಿನ ನಂಬಿಕೆ ಹಾಗೂ ವಿಶ್ವಾಸವನ್ನು ಇಟ್ಟಿದ್ದಾರೆ ಇದೇ ನಮ್ಮ ಗೆಲುವಿಗೆ ಸಹಕಾರ ಎಂದರು. ಯುವಜನತೆಯನ್ನು ಉದ್ದೇಶಿಸಿ ಮಾತನಾಡಿದ ಅವರು ಮೊದಲು ಯುವಕರು ಉದ್ಯೋಗಕ್ಕೆ ಹೆಚ್ಚಿನ ಮನ್ನಣೆ ನೀಡಬೇಕು ಆಗ ಮಾತ್ರ ಏನಾದರೂ ಸಾಧನೆ ಮಾಡಲು ಸಾಧ್ಯ ತಂದೆ ತಾಯಿಯರನ್ನು ಉತ್ತಮವಾಗಿ ನೋಡಿಕೊಳ್ಳುವ ನೆಲೆಗಟ್ಟು ಹೊಂದಿದವರು ಮಾತ್ರ ರಾಜಕೀಯಕ್ಕೆ ಬರಬೇಕು ಮೊದಲು ಜೀವನ ನಿರ್ವಹಣೆ ಮುಖ್ಯ ನಂತರ ರಾಜಕೀಯ ಎಂದರು ಹಾಗೂ ಇದು ಎಲ್ಲಾ ಪಕ್ಷಗಳ ಯುವಕರಿಗೂ ಕಿವಿ ಮಾತು ಎಂದರು. ಶೃಂಗೇರಿ ಕ್ಷೇತ್ರದಲ್ಲಿ ಹೊಸ ಹೊಸ ಉದ್ಯಮಗಳನ್ನು ಸ್ಥಾಪಿಸಿ ಯುವಕರಿಗೆ ಇಲ್ಲೇ ಉದ್ಯೋಗವನ್ನು ನೀಡಬೇಕು ಈ ನಿಟ್ಟಿನಲ್ಲಿ ಮಾಡಬೇಕಾದ ಎಲ್ಲಾ ಕೆಲಸಗಳ ಕುರಿತು ಯೋಜನೆ ಸಿದ್ಧವಾಗಿದೆ. ನಾನು ಜನರ ಒಳಿತಿಗಾಗಿ ಈ ಕ್ಷೇತ್ರಕ್ಕೆ ಬಂದವನೇ ಹೊರತು ಕೇವಲ ರಾಜಕೀಯಕ್ಕಾಗಿ ಅಲ್ಲ ಎಂದರು.

ಈ ಕಾರ್ಯಕ್ರಮದಲ್ಲಿ ಜೆಡಿಎಸ್ ರಾಜ್ಯ ಉಪಾಧ್ಯಕ್ಷರಾದ ಸುಧಾಕರ್ ಎಸ್ ಶೆಟ್ಟಿ, ರಾಜ್ಯ ಮುಖಂಡರಾದ ವೆಂಕಟೇಶ್, ಜಿಲ್ಲಾಧ್ಯಕ್ಷ ಅಜಿತ್ ರಂಜನ್ ಕುಮಾರ್, ದಿವಾಕರ ಭಟ್, ಪಕ್ಷದ ಮುಖಂಡರಾದ ಅಣ್ಣಾದೊರೆ, ಕಾರ್ಯದರ್ಶಿಗಳಾದ ದಿನೇಶ್, ಗಾಯನ್, ರಕ್ಷಿತ್, ಕಳಸಪ್ಪ ಗೌಡ, ಯುವ ಮುಖಂಡ ಚೇತನ್ ಹಾಗೂ ಇನ್ನಿತರ ಜೆಡಿಎಸ್ ಮುಖಂಡರು ಹಾಗೂ ಕಾರ್ಯಕರ್ತರು ಪಾಲ್ಗೊಂಡಿದ್ದರು.