ರಿಪ್ಪನ್ ಪೇಟೆ : (ನ್ಯೂಸ್ ಮಲ್ನಾಡ್ ವರದಿ) ವ್ಯಕ್ತಿಯೋರ್ವನನ್ನು ಬರ್ಬರವಾಗಿ ತನ್ನ ಸ್ನೇಹಿತರೇ ಹತ್ಯೆಗೈದ ಮನಕಲುಕುವ ಘಟನೆ ಗರ್ತಿಕೆರೆಯಲ್ಲಿ ನಡೆದಿದೆ.
ಶಿವಮೊಗ್ಗ ಜಿಲ್ಲೆಯ ಗರ್ತಿಕೆರೆ ಗ್ರಾಮದ ಸತೀಶ್ ಶೆಟ್ಟಿ ಎಂಬುವವರನ್ನು ತನ್ನ ಆತ್ಮೀಯ ಸ್ನೇಹಿತರೇ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆಗೈದಿದ್ದಾರೆ ಎಂದು ತಿಳಿದುಬಂದಿದೆ. ಹತ್ಯೆಗೀಡಾದ ಸತೀಶ್ ಶೆಟ್ಟಿರವರ ಪತ್ನಿ ಸಂಬಂಧಿಕರ ಮನೆಗೆ ತೆರಳಿದ್ದನ್ನು ತಿಳಿದ ಸ್ನೇಹಿತರಾದ ಫಯಾಜ್,ಕೃಷ್ಣ ಹಾಗೂ ಸತೀಶ್ ಮೂವರು ಸೇರಿ ಮನೆಯಲ್ಲೇ ಮಧ್ಯ ಸೇವಿಸಿ ಪಾರ್ಟಿ ಮಾಡಿದ್ದಾರೆ. ನಂತರ ಹಣದ ವಿಚಾರವಾಗಿ ಸತೀಶ್ ಅವರೊಂದಿಗೆ ಜಗಳ ಉಂಟಾಗಿ ಕೋಳಿ ಫಯಾಜ್ ಹಾಗೂ ಕೃಷ್ಣ ಸೇರಿ ಸ್ನೇಹಿತ ಸತೀಶ್ ಅವರನ್ನು ಕೊಲೆಗೈದಿದ್ದಾರೆ ಎಂದು ತಿಳಿದುಬಂದಿದೆ.
ಕೊಲೆಗೈದು ಶವವನ್ನು ಬಾರ್ ಸಮೀಪದ ಕೆರೆಯೊಂದಕ್ಕೆ ಎಸೆದು ಅಲ್ಲಿಂದ ಹೊರಟು ಹೋಗಿದ್ದರು, ನಂತರ ವಿಷಯ ತಿಳಿದ ಗ್ರಾಮಸ್ಥರು ಓರ್ವ ಆರೋಪಿ ಫಯಾಜ್ ನನ್ನು ಹಿಡಿದು ಥಳಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ. ಇನ್ನೋರ್ವ ಆರೋಪಿ ಕೃಷ್ಣ ತಲೆಮರೆಸಿಕೊಂಡಿದ್ದಾನೆ. ಕೊಲೆಯ ಕುರಿತಾಗಿ ರಿಪ್ಪನ್ ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ಈ ಕುರಿತು ತನಿಖೆ ನಡೆಸುತ್ತಿದ್ದಾರೆ. ತಲೆ ಮರೆಸಿಕೊಂಡಿರುವ ಆರೋಪಿಗಾಗಿ ಬಲೆ ಬೀಸಿದ್ದಾರೆ.

0 Comments