ಕೊಪ್ಪ : (ನ್ಯೂಸ್ ಮಲ್ನಾಡ್ ವರದಿ) ಬಜರಂಗದಳದ ಸಂಚಾಲಕನೋರ್ವ ಕ್ರೈಸ್ತ ಧರ್ಮದ ಕುರಿತಾಗಿ ಅಸಹ್ಯವಾಗಿ ಬರೆದಿದ್ದಾರೆ ಮತ್ತು ಚಿತ್ರವನ್ನು ಹಾಕಿದ್ದಾರೆ ಎಂದು ಆರೋಪಿಸಿ ರಾಜ್ಯ ಕ್ರೈಸ್ತಸಂಘದ ಸದಸ್ಯರು ದೂರು ನೀಡಿದ್ದಾರೆ.
ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ಬಜರಂಗದಳದ ಸಂಚಾಲಕ ರಾಕೇಶ್ ಹಿರೇಕೊಡಿಗೆ ಎಂಬ ವ್ಯಕ್ತಿ ಫೇಸ್ಬುಕ್ ನಲ್ಲಿ ಕ್ರೈಸ್ತಧರ್ಮದ ಕುರಿತಾಗಿ ಅಸಹ್ಯವಾಗಿ ಬರೆದಿದ್ದಾರೆ ಎಂದು ಆರೋಪಿಸಿ ರಾಜ್ಯ ಕ್ರೈಸ್ತಸಂಘಗಳ ಒಕ್ಕೂಟದ ಕೊಪ್ಪ ವಿಭಾಗದ ಸದಸ್ಯರು ಡಿ.ವೈ.ಎಸ್.ಪಿ ಗುಂಜನ್ ಆರ್ಯ ಅವರಿಗೆ ದೂರು ನೀಡಿದ್ದಾರೆ. ಹಾಗೂ ಇತ್ತೀಚೆಗಷ್ಟೇ ಕೊಪ್ಪದಲ್ಲಿ ನಡೆದ ಹಿಂದೂ ಸಂಗಮ ಕಾರ್ಯಕ್ರಮದಲ್ಲಿ ಕೂಡ ಪ್ರಚೋದನೆ ನೀಡುವಂತೆ ಭಾಷಣ ನಡೆಸಿದ್ದರು ಈ ವ್ಯಕ್ತಿಯಿಂದ ಕೋಮು ಗಲಭೆಗಳು ಹೆಚ್ಚುತ್ತಿವೆ ಇವರ ಮೇಲೆ ಸೂಕ್ತ ಕ್ರಮಕೈಗೊಂಡು ಊರಿನ ಕೋಮು ಸೌಹಾರ್ದತೆಗೆ ಯಾವುದೇ ಧಕ್ಕೆ ಬಾರದಂತೆ ಕ್ರಮವಹಿಸಬೇಕೆಂದು ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ.
ದೂರು ನೀಡುವ ಸಂದರ್ಭದಲ್ಲಿ ಕರ್ನಾಟಕ ಕ್ರೈಸ್ತಸಂಘಗಳ ಒಕ್ಕೂಟದ ಕೊಪ್ಪ ವಿಭಾಗದ ಸದಸ್ಯರು ಹಾಗೂ ಕ್ರೈಸ್ತ ಧರ್ಮೀಯರು ಇದ್ದರು.

0 Comments