ಮೂಡಿಗೆರೆ : ಐದು ವರ್ಷದ ಪುಟ್ಟ ಬಾಲಕಿಯ ಮೇಲೆ ಕಾಮುಕನೊಬ್ಬ ಅತ್ಯಾಚಾರ ಮಾಡಲು ಯತ್ನಿಸಿದ ಘಟನೆ ಕಾಫೀನಾಡಿನಲ್ಲಿ ನಡೆದಿದೆ.
ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಬಣಕಲ್ ಠಾಣಾ ವ್ಯಾಪ್ತಿಯ ಕೋಳೂರಿನ 36 ವರ್ಷದ ನಾರಾಯಣ ಎಂಬ ಆರೋಪಿಯು 5 ವರ್ಷದ ಪುಟ್ಟ ಬಾಲಕಿಯ ಮೇಲೆ ಅತ್ಯಾಚಾರ ಎಸಗಲು ಪ್ರಯತ್ನಿಸಿದ್ದಾನೆ. ಘಟನೆಯ ಕುರಿತಾಗಿ ಬಾಲಕಿಯ ತಾಯಿಯು ಬಣಕಲ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ತಕ್ಷಣವೇ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಯನ್ನು ಪೊಕ್ಸೋ ಕಾಯ್ದೆಯಡಿ ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.
ಜಿಲ್ಲೆಯಲ್ಲಿ ಈ ರೀತಿಯಾದ ದುರ್ಘಟನೆಗಳು ನಡೆಯುತ್ತಲೇ ಇದೆ. ಕಾನೂನಿನ ಭಯವಿಲ್ಲದೆ ನಿರಾತಂಕವಾಗಿ ಅತ್ಯಾಚಾರಿಗಳು ಅತ್ಯಾಚಾರ ನಡೆಸುತ್ತಿರುವುದು ಸಾರ್ವಜನಿಕರನ್ನು ಆತಂಕಕ್ಕೀಡುಮಾಡಿದೆ. ಅತ್ಯಾಚಾರ ಎಸಗುವವರನ್ನು ಕಠಿಣ ಶಿಕ್ಷೆಗೆ ಗುರಿಪಡಿಸಿ ಕಾನೂನಿನ ಅಡಿಯಲ್ಲಿ ಬರುವ ಎಲ್ಲಾ ಕ್ರಮಗಳನ್ನು ಶೀಘ್ರವಾಗಿ ಜರುಗಿಸಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
ತನು ಕೊಟ್ಟಿಗೆಹಾರ, ವರದಿಗಾರರು.

0 Comments