ಚಿಕ್ಕಮಗಳೂರು : ಶಾಂತಿಯಿಂದ ನಡೆದ ಗ್ರಾಮ ಪಂಚಾಯತ್ ಚುನಾವಣೆ.

ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ತರುವೆ ಹಾಗೂ ಬಣಕಲ್ ಗ್ರಾಮ ಪಂಚಾಯಿತಿ ಚುನಾವಣೆ ಸೋಮವಾರ ಶಾಂತಿಯುತವಾಗಿ ನಡೆಯಿತು. ಕೊಟ್ಟಿಗೆಹಾರದ ತರುವೆ ಹಾಗೂ ಅತ್ತಿಗೆರೆ ಮತಗಟ್ಟೆಯಲ್ಲಿ ಒಟ್ಟು 1328 ಮತದಾರರಿದ್ದು ಅದರಲ್ಲಿ ಪುರುಷರು 516 ಹಾಗೂ ಮಹಿಳೆಯರು 556 ಒಟ್ಟು 1072  ಮತದಾರರು ಮತ ಚಲಾಯಿಸಿದ್ದಾರೆ.

ತರುವೆ,ಅತ್ತಿಗೆರೆ ಮತಗಟ್ಟೆಯಲ್ಲಿ ಶೇ 80.72 ಮತದಾನ ನಡೆದಿದೆ. ಬಿನ್ನಡಿ ಮತಗಟ್ಟೆಯಲ್ಲಿ ಒಟ್ಟು 303 ಮತದಾರರಿದ್ದು ಪುರುಷರು 150 ಹಾಗೂ ಮಹಿಳೆಯರು 129 ಒಟ್ಟು 279 ಮತದಾರರು ಮತ ಚಲಾಯಿಸಿದ್ದಾರೆ. ಬಿನ್ನಡಿಯಲ್ಲಿ ಶೇ. 91.47 ರಷ್ಟು ಮತದಾನವಾಗಿದೆ. 

https://chat.whatsapp.com/I2r7uKjzrF9AlSwMn2xClg

ಚುನಾವಣಾಧಿಕಾರಿಗಳಾಗಿ ಅಕ್ಷಯ್ ಹಾಗೂ ಸಹಾಯಕ ಚುನಾವಣಾಧಿಕಾರಿಯಾಗಿ ಯೋಗೀಶ್ ಭಾಗವಹಿಸಿದ್ದರು. ಬಣಕಲ್ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಶೇ 70.89 ಮತದಾನವಾಗಿದೆ. ಒಟ್ಟು 4964 ಮತದಾರರಲ್ಲಿ 3519 ಮತದಾರರು ಮತ ಚಲಾಯಿಸಿದ್ದಾರೆ. ಚುನಾವಣಾಧಿಕಾರಿಯಾಗಿ ಎಂ. ಕೆ. ಪುಟ್ಟಸ್ವಾಮಿ ಸಹಾಯಕ ಚುನಾವಣಾಧಿಕಾರಿ ಕೆ. ಆರ್. ಶ್ರೀನಿವಾಸ್, ಗ್ರಾಮ ಲೆಕ್ಕಾಧಿಕಾರಿ ಆನಂದ್ ಹಾಗೂ ಪಿ.ಎಸ್.ಐ. ಗಾಯತ್ರಿ, ಎ.ಎಸ್.ಐ. ಶಶಿ ಹಾಗೂ ಪೊಲೀಸ್ ಸಿಬ್ಬಂದಿಗಳು ಕರ್ತವ್ಯದಲ್ಲಿ ಹಾಜರಿದ್ದರು. 

ತನು ಕೊಟ್ಟಿಗೆಹಾರ, ವರದಿಗಾರರು.