ಶಿವಮೊಗ್ಗ : (ನ್ಯೂಸ್ ಮಲ್ನಾಡ್ ವರದಿ) ಇನ್ನೇನು ಪರಿಷತ್ ಚುನಾವಣಾ ದಿನ ಹತ್ತಿರವಾಗಿದೆ ಈ ಸಂದರ್ಭದಲ್ಲಿ ಎರಡೂ ರಾಷ್ಟ್ರೀಯ ರಾಜಕೀಯ ಪಕ್ಷಗಳು ವಿವಿಧ ರೀತಿಯ ಕಸರತ್ತುಗಳನ್ನು ನಡೆಯುತ್ತಿದೆ.
ಗ್ರಾಮ ಪಂಚಾಯತ್ ಸದಸ್ಯೆಯೋರ್ವರು ಒಂದೇ ದಿನ ಎರಡು ಪಕ್ಷವನ್ನು ಬದಲಾವಣೆ ಮಾಡಿದ ಘಟನೆ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಅರಸಾಳು ಗ್ರಾಮದಲ್ಲಿ ನಡೆದಿದೆ. ಅರಸಾಳು ಗ್ರಾಮಪಂಚಾಯತ್ ಸದಸ್ಯೆ ಪೂರ್ಣಿಮಾ ಅವರು ಮೊದಲಿಗೆ ಕಾಂಗ್ರೆಸ್ ಪಕ್ಷದಲ್ಲಿದ್ದರು, ಬೆಳಗ್ಗಿನ ಸಮಯದಲ್ಲಿ ಸಚಿವ ಈಶ್ವರಪ್ಪ ಹಾಗೂ ಶಾಸಕ ಹರತಾಳು ಹಾಲಪ್ಪ ಅವರ ಸಮ್ಮುಖದಲ್ಲಿ ಕಾಂಗ್ರೆಸ್ ಬೆಂಬಲಿತ ಗ್ರಾಮಪಂಚಾಯತ್ ಸದಸ್ಯೆ ಪೂರ್ಣಿಮಾ ಬಿಜೆಪಿಗೆ ಸೇರ್ಪಡೆಗೊಂಡಿದ್ದರು, ಬಹಳ ಯಶಸ್ವಿಯಾಗಿ ಈ ಕಾರ್ಯಕ್ರಮ ನಡೆಯಿತು. ಪೂರ್ಣಿಮಾ ಬಿಜೆಪಿಗೆ ಸೇರಿದ ವಿಷಯವನ್ನು ತಿಳಿದ ಕಾಂಗ್ರೆಸ್ಸಿಗರು ತಕ್ಷಣವೇ ಅವರ ಮನವೊಲಿಸುವ ಕೆಲಸ ಮಾಡಿ ಸಂಜೆಯೊಳಗೆ ಪುನಃ ಕಾಂಗ್ರೆಸ್ ಪಕ್ಷಕ್ಕೆ ಮರಳಿ ಕರೆತಂದಿದೆ.
ವಿಧಾನ ಪರಿಷತ್ ಚುನಾವಣೆಗೆ ಸ್ಪರ್ಧಿಸಿರುವ ತಮ್ಮ ತಮ್ಮ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸಲು ಎಲ್ಲಾ ರಾಜಕೀಯ ಪಕ್ಷಗಳು ಬಹಳ ಕಸರತ್ತು ಹಾಗೂ ತಯಾರಿ ನಡೆಸುತ್ತಿದೆ. ಒಂದೆಡೆ ಹಣ ಹಾಗೂ ಇನ್ನಿತರ ಆಮಿಷಗಳನ್ನು ಒಡ್ಡಿ ಕೆಲವೊಬ್ಬರು ಮತಬೇಟೆ ನಡೆಸಲು ಸಜ್ಜಾದರೆ ಇನ್ನೊಂದೆಡೆ ಈ ರೀತಿಯಾದ ಆಪರೇಶನ್ ಗಳು ನಡೆಯುತ್ತಿದೆ. ಒಟ್ಟಾರೆ ಕೇವಲ ಇನ್ನೆರಡು ದಿನಗಳಲ್ಲಿ ಚುನಾವಣೆ ನಡೆಯಲಿದೆ. ಕೊನೇ ಕ್ಷಣದ ಕಸರತ್ತುಗಳನ್ನು ನಡೆಸಲು ಎಲ್ಲಾ ರಾಜಕೀಯ ಪಕ್ಷಗಳು ಮುಂದಾಗಿದೆ.

0 Comments