ಚಿಕ್ಕಮಗಳೂರು : (ನ್ಯೂಸ್ ಮಲ್ನಾಡ್ ವರದಿ) ಬಾಳೆಹೊನ್ನೂರಿನ ವ್ಯಕ್ತಿಯೋರ್ವರು ಕಳೆದ 14 ದಿನಗಳಿಂದ ಕಾಣೆಯಾಗಿದ್ದಾರೆ ಎಂದು ತಿಳಿದುಬಂದಿದೆ.

ಚಿಕ್ಕಮಗಳೂರು ಜಿಲ್ಲೆಯ ನರಸಿಂಹರಾಜಪುರ ತಾಲೂಕಿನ ಬಾಳೆಹೊನ್ನೂರಿನ ಖಾಂಡ್ಯ ಹೋಬಳಿಯ ಕೃಷ್ಣೇಗೌಡ ಬಿಹಾರ್ ಎಂಬುವವರು ಕಳೆದ ಹದಿನಾಲ್ಕು ದಿನಗಳಿಂದ ನಾಪತ್ತೆಯಾಗಿದ್ದಾರೆ. ಈ ಕುರಿತಾಗಿ ಬಾಳೆಹೊನ್ನೂರು ಪೊಲೀಸ್ ಠಾಣೆಗೆ ಅವರ ಪುತ್ರ ದೂರು ನೀಡಿದ್ದಾರೆ, ಪೊಲೀಸರು ಕೂಡ ಈ ಕುರಿತು ಅವರನ್ನು ಪತ್ತೆ ಮಾಡುವ ಸಲುವಾಗಿ ಪ್ರಕ್ರಿಯೆಗಳನ್ನು ನಡೆಸುತ್ತಿದ್ದಾರೆ. ಆದರೆ ಇದುವರೆಗೂ ಕೂಡ ಯಾವುದೇ ಮಾಹಿತಿಗಳು ಲಭ್ಯವಾಗಿಲ್ಲ. ಕೃಷ್ಣೇಗೌಡ ರವರ ಪುತ್ರ ದೇವೇಂದ್ರ ಬಿ.ಕೆ ಅವರು ತಮ್ಮ ತಂದೆಯನ್ನು ಹುಡುಕಿಕೊಡುವಂತೆ ಸಾರ್ವಜನಿಕರಲ್ಲಿ ಹಾಗೂ ಇಲಾಖೆಯಲ್ಲಿ ಕೋರಿದ್ದಾರೆ.

https://chat.whatsapp.com/I2r7uKjzrF9AlSwMn2xClg

ಕೃಷ್ಣೇಗೌಡ ಅವರು 50 ವರ್ಷ ವಯಸ್ಸು, 5.7 ಎತ್ತರ, ಕನ್ನಡ ಹಾಗೂ ತುಳು ಭಾಷೆ ಮಾತನಾಡುತ್ತಾರೆ, ಮನೆಯಿಂದ ಹೋಗುವಾಗ ಬಿಳಿ ಹಾಗೂ ಕೆಂಪು ಪಟ್ಟಿಯ ಬಟ್ಟೆ ಧರಿಸಿರುತ್ತಾರೆ, ಎಂದು ಮನೆಯವರು ಮಾಹಿತಿ ನೀಡಿದ್ದಾರೆ.

ಇವರನ್ನು ಯಾರಾದರೂ ಕಂಡಲ್ಲಿ ಮನೆಯವರಿಗೆ ತಿಳಿಸಬೇಕೆಂದು ದೇವೇಂದ್ರ ಅವರು ಕೋರಿದ್ದಾರೆ. ಈ ವ್ಯಕ್ತಿಯನ್ನು ಕಂಡಲ್ಲಿ ಈ ಕೆಳಗಿನ ಮೊಬೈಲ್ ಸಂಖ್ಯೆಗಳಿಗೆ ಕರೆ ಮಾಡಿ ತಿಳಿಸಿ.

8277715136 / 8618094956 / 8660649950