ತೀರ್ಥಹಳ್ಳಿ : (ನ್ಯೂಸ್ ಮಲ್ನಾಡ್ ವರದಿ) ತೋಟದ ಕಾರ್ಮಿಕನೋರ್ವ ಹೃದಯಾಘಾತದಿಂದ ಸಾವನ್ನಪ್ಪಿದ ಸುದ್ದಿಯನ್ನು ಆತನ ಮನೆಯವರಿಗೆ ತಿಳಿಸಲು ಹೊರಟ ತೋಟದ ಮಾಲೀಕ ಕೂಡ ಅರ್ಧ ದಾರಿಯಲ್ಲೇ ಹೃದಯಾಘಾತದಿಂದ ಸಾವನ್ನಪ್ಪಿದ ದುರ್ಘಟನೆ ತೀರ್ಥಹಳ್ಳಿಯಲ್ಲಿ ನಡೆದಿದೆ.

ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯ ಆರಗ ಗೇಟ್ ನ ದುಗ್ಗಪ್ಪ ಗೌಡ ಎಂಬುವವರ ತೋಟದಲ್ಲಿ ಹಲವಾರು ವರ್ಷಗಳಿಂದ ಕೆಲಸ ಮಾಡುತ್ತಿದ್ದ ಬರ್ಮಪ್ಪ ಎಂಬ ವ್ಯಕ್ತಿ ದುಗ್ಗಪ್ಪ ಎಂಬ ತೋಟದ ಮಾಲೀಕರ ಮನೆಯಲ್ಲಿ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದ, ಪ್ರತಿದಿನದಂತೆ ಉತ್ಸಾಹದಿಂದ ಕೆಲಸ ಮಾಡಿ ಊಟ ಮಾಡಿ ಮಲಗಿದ್ದ ಆತನಿಗೆ ಹೃದಯಾಘಾತವಾಗಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎನ್ನಲಾಗಿದೆ. 

https://chat.whatsapp.com/I2r7uKjzrF9AlSwMn2xClg

ಈ ವಿಚಾರವನ್ನು ಮೃತ ಬರ್ಮಪ್ಪ ಅವರ ಮನೆಯವರಿಗೆ ತಿಳಿಸುವ ಸಲುವಾಗಿ ಮನೆಯಿಂದ ಆತುರದಿಂದ ತೆರಳಿದ ದುಗ್ಗಪ್ಪಗೌಡ ಅವರಿಗೂ ಕೂಡ ದುರ್ವಿಧಿಯಿಂದಾಗಿ ಹೃದಯಾಘಾತ ಸಂಭವಿಸಿದೆ. ತಕ್ಷಣವೇ ಅವರನ್ನು ಸ್ಥಳೀಯರ ನೆರವಿನಿಂದ ಆಸ್ಪತ್ರೆಗೆ ದಾಖಲಿಸುವ ಏರ್ಪಾಡು ಮಾಡಿದರೂ ಕೂಡ ಮಾರ್ಗ ಮಧ್ಯೆಯೇ ಶಿಕ್ಷಕ ದುಗ್ಗಪ್ಪ ಗೌಡ ಅವರು ಕೊನೆಯುಸಿರೆಳೆದಿದ್ದಾರೆ.  

ಒಂದೆಡೆ ತೋಟದ ಕಾರ್ಮಿಕ ಇನ್ನೊಂದೆಡೆ ತೋಟದ ಮಾಲೀಕ ಇಬ್ಬರೂ ಕೂಡ ಮೃತಪಟ್ಟಿರುವುದು ಸಂಬಂಧಿಕರನ್ನು ಬೇಸರಕ್ಕೀಡುಮಾಡಿದೆ. ಈ ಸಾವಿನ ಸುದ್ದಿ ತಿಳಿದ ಗ್ರಾಮಸ್ಥರು ಕಾರ್ಮಿಕನ ಹಾಗೂ ಮಾಲೀಕನ ಅವಿನಾಭಾವ ಸಂಬಂಧದ ಕುರಿತು ನೆನೆದುಮಾತನಾಡುತ್ತಿದ್ದಾರೆ.