ಚಿಕ್ಕಮಗಳೂರು : (ನ್ಯೂಸ್ ಮಲ್ನಾಡ್ ವರದಿ) ರಸ್ತೆಯ ಬದಿಗೆ ಕಸ ಎಸೆಯುತ್ತಿದ್ದ ಯುವಕನನ್ನು ಶಾಸಕ ಸಿಟಿ ರವಿ ತೀವ್ರವಾಗಿ ತರಾಟೆಗೆ ತೆಗೆದುಕೊಂಡ ಘಟನೆ ಇಂದು ಚಿಕ್ಕಮಗಳೂರಿನಲ್ಲಿ ನಡೆದಿದೆ.
ಚಿಕ್ಕಮಗಳೂರು ಜಿಲ್ಲೆಯ ಮಲ್ಲಂದೂರು ರಸ್ತೆಯ ಉಪ್ಪಳ್ಳಿ ಚಿತಾಗಾರದ ರಸ್ತೆಯ ಸಮೀಪದಲ್ಲಿರುವ ಹಳ್ಳಕ್ಕೆ ಯುವಕನೋರ್ವ ಕಸ ತಂದು ಎಸೆಯುವ ಸಂದರ್ಭದಲ್ಲಿ ಕಾರಿನಲ್ಲಿ ಮತದಾನ ಮಾಡಲು ತೆರಳುತ್ತಿದ್ದ ಶಾಸಕ ಸಿಟಿ ರವಿ ಗಮನಿಸಿ ನಡು ರಸ್ತೆಯಲ್ಲೇ ಯುವಕನನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡರು.
ಮನೆಯ ಸಮೀಪಕ್ಕೆ ಕಸ ವಿಲೇವಾರಿ ಮಾಡುವ ವಾಹನ ಬಂದರೂ ಕೂಡ ಈ ರೀತಿಯ ವರ್ತನೆ ಮಾಡುವುದು ಎಷ್ಟು ಸರಿ ಇನ್ನೊಂದು ಬಾರಿ ಈ ರೀತಿ ನಡೆದುಕೊಂಡರೆ ಸರಿಯಿರುವುದಿಲ್ಲ ಎಂದು ಕ್ಲಾಸ್ ತೆಗೆದುಕೊಂಡಿದ್ದಾರೆ.
ಒಂದೆಡೆ ಸ್ವಚ್ಚತೆಯೆಡೆಗೆ ಹೆಚ್ಚಿನ ಪ್ರಾಮುಖ್ಯತೆ ನೀಡುವ ಸಲುವಾಗಿ ಸರ್ಕಾರ ಹಲವಾರು ಯೋಜನೆಗಳ ಮೂಲಕ ಹಾಗೂ ವಿವಿಧ ರೀತಿಯಲ್ಲಿ ಜನರಿಗೆ ಅರಿವನ್ನು ಮೂಡಿಸುತ್ತಿದ್ದರೆ ಇನ್ನೊಂದೆಡೆ ಸಮಾಜವನ್ನು ಬದಲಾಯಿಸಬೇಕಾದ ಯುವಕರು ಈ ರೀತಿಯಾಗಿ ನಡೆದುಕೊಳ್ಳುವುದು ಅವರ ವ್ಯಕ್ತಿತ್ವವನ್ನು ಬಿಂಬಿಸುತ್ತದೆ ಎಂದು ಸಾರ್ವಜನಿಕರು ಮಾತನಾಡುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಸ್ವಚ್ಛತೆಯ ಕಡೆಗೆ ಎಲ್ಲರೂ ಹೆಚ್ಚಿನ ಒಲವನ್ನು ನೀಡಬೇಕೆಂದು ಅಧಿಕಾರಿಗಳು ಆಗ್ರಹಿಸಿದ್ದಾರೆ. ಶಾಸಕರ ಈ ಕಳಕಳಿಗೆ ಬಹಳಷ್ಟು ಜನ ಉತ್ತಮ ಪ್ರತಿಕ್ರಿಯೆನೀಡಿದ್ದಾರೆ.

0 Comments