ಶಿವಮೊಗ್ಗ : (ನ್ಯೂಸ್ ಮಲ್ನಾಡ್ ವರದಿ) ಸಾರ್ವಜನಿಕರ ಬಳಕೆಗಾಗಿ ಅಳವಡಿಸಲಾಗಿದ್ದ ಬೀದಿ ನಲ್ಲಿಗಳನ್ನು ನಿರಂತರವಾಗಿ ಕಳ್ಳತನ ನಡೆಸುತ್ತಿರುವ ಪ್ರಕರಣ ಬೆಳಕಿಗೆ ಬಂದಿದೆ.

ಇಪ್ಪತ್ನಾಲ್ಕು ಗಂಟೆಗಳ ಕಾಲ ನಗರದಲ್ಲಿ ನೀರು ಪೂರೈಕೆ ಮಾಡುವ ಆಶಯದಿಂದ ಘೋಷಣೆ ಮಾಡಿದ್ದ ಯೋಜನೆಯಡಿಯಲ್ಲಿ ಅಳವಡಿಕೆ ಮಾಡಲಾಗಿದ್ದ ನಲ್ಲಿಗಳನ್ನು ಒಂದೊಂದರಂತೆ ಕಳ್ಳರು ದಿನೇ ದಿನೇ ಕಳ್ಳತನ ಮಾಡುತ್ತಿರುವುದು ತಿಳಿದು ಬಂದಿದೆ. ಶಿವಮೊಗ್ಗದ ನೆಹರೂ ರಸ್ತೆಯ ಆಸುಪಾಸಿನಲ್ಲಿ ಅಳವಡಿಕೆ ಮಾಡಿದ್ದ ನಲ್ಲಿಗಳು ಕಣ್ಮರೆಯಾಗುತ್ತಿದೆ. ಈ ಘಟನೆಯ ಕುರಿತು ವರ್ತಕರು ಮಾಹಿತಿ ನೀಡಿದ್ದರೂ ಕೂಡ ಯಾವುದೇ ಪ್ರಯೋಜನವಾಗಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

24 ಗಂಟೆಯ ನೀರಿನ ವ್ಯವಸ್ಥೆಯ ಕುರಿತಾಗಿ ಈಗಾಗಲೇ ಪೈಪುಗಳನ್ನು ಅಳವಡಿಕೆ ಮಾಡಲಾಗಿದೆ ಈ ಕುರಿತು ಅಧಿಕಾರಿಗಳು ಗಮನವಹಿಸದೇ ಹೋದಲ್ಲಿ ಮುಂದಿನ ದಿನಗಳಲ್ಲಿ ನಲ್ಲಿಗಳ ಜೊತೆಗೆ ಪೈಪುಗಳೂ ಕೂಡ ಕಳವಾಗುವ ಸಂಭವಗಳಿದೆ ಎಂದು ಸಾರ್ವಜನಿಕರು ಆತಂಕ ವ್ಯಕ್ತಪಡಿಸಿದ್ದಾರೆ. 

ಸಾರ್ವಜನಿಕರ ಹಣದಿಂದ ಈ  ಕಾಮಗಾರಿಗಳು ನಡೆಯುತ್ತಿದ್ದು ಸಾರ್ವಜನಿಕರೇ ಈ ಕುರಿತು ಗಮನ ಹರಿಸದೇ ಕಂಪ್ಲೇಟ್ ನೀಡದೆ ಇರುವುದು ಕಳ್ಳರ ಈ ಕೃತ್ಯಗಳಿಗೆ ಅಂತ್ಯವೇ ಇಲ್ಲದಂತೆ ಮಾಡುತ್ತಿದೆ. ಸಂಬಂಧ ಪಟ್ಟ ಅಧಿಕಾರಿಗಳು ಈ ಕುರಿತು ಗಮನಹರಿಸಿ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.