ಹಾಸನ : (ನ್ಯೂಸ್ ಮಲ್ನಾಡ್ ವರದಿ) ಇದ್ದಕ್ಕಿದ್ದಂತೆ ಆಕಸ್ಮಿಕವಾಗಿ ಬೆಂಕಿ ಅವಘಡ ಉಂಟಾದ ಪರಿಣಾಮ  ಹಸು ಹಾಗೂ ಕರುಗಳು ಸಾವನ್ನಪ್ಪಿದ ಘಟನೆ ಹಾಸನದ ಹೊರವಲಯದಲ್ಲಿ ನಡೆದಿದೆ.

ಹಾಸನ ಜಿಲ್ಲೆಯ ಅರಸೀಕೆರೆ ತಾಲೂಕಿನ ಯರಿಗೇನಹಳ್ಳಿಯಲ್ಲಿ ಈ ದುರ್ಘಟನೆ ಸಂಭವಿಸಿದೆ. ಯರಿಗೇನಹಳ್ಳಿಯಲ್ಲಿ ವಾಸವಿರುವ ಮಂಜುನಾಥ್ ಎಂಬುವವರಿಗೆ ಸೇರಿರುವ ಹಸು ಹಾಗೂ ಕರುಗಳು ಇದಾಗಿದ್ದು ಮನೆಯ ಸಮೀಪವಿರುವ ಕೊಟ್ಟಿಗೆಗೆ ನಿನ್ನೆ ತಡರಾತ್ರಿ ಆಕಸ್ಮಿಕವಾಗಿ ಬೆಂಕಿ ತಗುಲಿದ್ದು ಹೊತ್ತಿ ಉರಿಯಲಾರಂಭಿಸಿದೆ. 

ಅತೀ ವೇಗವಾಗಿ ಬೆಂಕಿ ಎಲ್ಲೆಡೆ ಚಾಚಿಕೊಂಡು ಮೂಕ ಪ್ರಾಣಿಗಳನ್ನು ಬಲಿ ತೆಗೆದುಕೊಂಡಿದೆ. ಕೂಡಲೇ ಸ್ಥಳೀಯರು ಸೇರಿದರೂ ಕೂಡ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಲಿಲ್ಲ, ಈ ದುರ್ಘಟನೆಯಲ್ಲಿ ಎರಡು ಹಸು ಹಾಗೂ ಒಂದು ಕರು ಸಜೀವವಾಗಿ ಮೃತಪಟ್ಟಿದೆ. 

ಪ್ರಾಣಿಗಳನ್ನು ಸಾಕಲು ಇಚ್ಛೆ ಇಲ್ಲದ ಈಗಿನ ಕಾಲದಲ್ಲಿ ಮೂಕ ಪ್ರಾಣಿಗಳನ್ನು ಪ್ರೀತಿಯಿಂದ ಸಾಕುತ್ತಿದ್ದ ಮಂಜುನಾಥ್ ಅವರ ಕುಟುಂಬ ಈ ಘಟನೆಯಿಂದಾಗಿ ಬೇಸರ ವ್ಯಕ್ತಪಡಿಸಿದೆ.