ಕೊಪ್ಪ : (ನ್ಯೂಸ್ ಮಲ್ನಾಡ್ ವರದಿ) ಬಜರಂಗದಳದ ಸಂಚಾಲಕನ ಮೇಲೆ ಕ್ರಿಶ್ಚಿಯನ್ ಸಂಘಗಳು ನೀಡಿರುವ ದೂರಿಗೆ ಕೆಂಡಾ ಮಂಡಲವಾಗಿರುವ ಬಜರಂಗದಳವು ದೂರು ನೀಡಿರುವುದನ್ನು ತೀವ್ರವಾಗಿ ಖಂಡಿಸಿದೆ.

ಧರ್ಮದ ಮೇಲೆ ನಿಜವಾದ ಕಾಳಜಿ ಹೊಂದಿದವರು ಮತಾಂತರ ಮಾಡುವುದಿಲ್ಲ ಬದಲಾಗಿ ಯಾರು ಮತಾಂತರ ಮಾಡುತ್ತಾರೋ ಅವರಿಗೆ ಬುದ್ಧಿಹೇಳಿ ಸರಿದಾರಿಗೆ ತರುತ್ತಾರೆ. ವಾಟ್ಸಾಪ್ ಸ್ಟೇಟಸ್ ಹಾಕಿದ ಕಾರಣಕ್ಕೆ ಪ್ರಕರಣ ದಾಖಲು ಮಾಡಿಕೊಳ್ಳುವುದಾದರೆ ತಾಲೂಕಿನಾದ್ಯಂತ ಸಾವಿರಾರು ಬಜರಂಗದಳದ ಕಾರ್ಯಕರ್ತರು ಸ್ಟೇಟಸ್ ಹಾಕಲಿದ್ದಾರೆ ಎಂದು ಖಾರವಾಗಿ ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗದಳ ಕೊಪ್ಪ ಪ್ರಖಂಡವು ಪ್ರತಿಕ್ರಿಯಿಸಿದೆ.

ಧಾರ್ಮಿಕ ಭಾವನೆಗಳಿಗೆ ಧಕ್ಕೆ ಆರೋಪ : ಕೊಪ್ಪ ಬಜರಂಗದಳದ ಮುಖಂಡನ ವಿರುದ್ದ ಕ್ರೈಸ್ತ ಸಂಘಟನೆಗಳಿಂದ ದೂರು

ರಾಮನ ಫೋಟೋ ಹಾಕಿದ ಕಾರಣಕ್ಕೆ ಕ್ರಿಶ್ಚಿಯನ್ ಧರ್ಮದವರಿಗೆ ನೋವಾಗಿದ್ದರೆ ಹಿಂದೂ ಧರ್ಮದ ಕುರಿತಾಗಿ ಅವಹೇಳನ ಮಾಡಿ ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರ ಮಾಡುವಾಗ ನಮಗೆಷ್ಟು ನೋವಾಗಿರಬಹುದು ಎಂಬ ಪ್ರಶ್ನೆಯನ್ನು ಮುಂದಿಟ್ಟಿದೆ. ಕರ್ನಾಟಕ ಕ್ರೈಸ್ತ ಸಂಘಗಳ ಒಕ್ಕೂಟದ ಕೊಪ್ಪ ಶಾಖೆಯ ಅಧ್ಯಕ್ಷರಾದ ಅನಿಲ್ ಕುಲಾಸೊ ಅವರ ಮೇಲೂ ಪೊಲೀಸರು ನಿಗಾ ವಹಿಸಬೇಕು, ಇವರೂ ಕೂಡ ಮತಾಂತರ ಮಾಡುವ ಏಜೆಂಟ್ ಎಂಬ ಅನುಮಾನವಿದೆ ಎಂದು ಬಜರಂಗದಳ ಕೊಪ್ಪ ಪ್ರಖಂಡ ಹೇಳಿದೆ. 

ಕ್ರಿಶ್ಚಿಯನ್ ಒಕ್ಕೂಟ ನೀಡಿರುವ ದೂರು ಸುಳ್ಳಾಗಿದೆ, ರಾಕಿ ಹಿರೇಕೊಡಿಗೆ ಯಾವುದೇ ಪ್ರಚೋದನಕಾರಿ ಫೋಟೋ ಅಥವಾ ಬರಹಗಳನ್ನು ಫೇಸ್ಬುಕ್ನಲ್ಲಿ ಹಾಕಿರುವುದಿಲ್ಲ, ಸುಳ್ಳು ದೂರನ್ನು ನೀಡಿ ಇಲಾಖೆಯ ದಾರಿ ತಪ್ಪಿಸುವ ಹಾಗೂ ಸಮಾಜದಲ್ಲಿ ಶಾಂತಿ ಕದಡುವ ಕೆಲಸವನ್ನು ನಡೆಸುತ್ತಿದ್ದಾರೆ ,ರಾಕಿ ಹಿರೇಕೊಡಿಗೆ ಮೇಲೆ ಎಫ್.ಐ.ಆರ್ ದಾಖಲು ಮಾಡಿದ್ದೆ ಆದಲ್ಲಿ ಕೋಮು ಪ್ರಚೋದನೆ ನೀಡಿದ ಇತರ ಪೋಸ್ಟ್ಗಳ ಮೇಲೆ ಕೇಸ್ ದಾಖಲಿಸುವ ಕುರಿತಾಗಿ ಆಗ್ರಹಿಸಿ ಮುಂದಿನ  ಹೋರಾಟ ನಡೆಸುವ ಎಚ್ಚರಿಕೆಯನ್ನು ಕೊಪ್ಪ ಬಜರಂಗದಳ ನೀಡಿದೆ.