ಕೊಡಗು : (ನ್ಯೂಸ್ ಮಲ್ನಾಡ್ ವರದಿ) ಭ್ರಷ್ಟಾಚಾರ ವಿರೋಧಿ ದಿನವಾದ ಇಂದು ಭ್ರಷ್ಟಾಚಾರ ನಡೆಸಿದ ತಾಲೂಕು ವೈದ್ಯಾಧಿಕಾರಿ ಸೆರೆಸಿಕ್ಕಿರುವ ಘಟನೆ ಇಂದು ಕೊಡಗಿನಲ್ಲಿ ನಡೆದಿದೆ.
ಮಡಿಕೇರಿಯ ವಿರಾಜಪೇಟೆ ತಾಲೂಕಿನ ಆರೋಗ್ಯಾಧಿಕಾರಿ ವಿಶ್ವನಾಥ್ ಎಂಬ ಅಧಿಕಾರಿಯನ್ನು ಸಾರ್ವಜನಿಕರ ದೂರಿನ ಮೇರೆಗೆ ಕಾರ್ಯಾಚರಣೆ ನಡೆಸಿ ದಾಖಲೆ ಸಮೇತ ವೈದ್ಯ ವಿಶ್ವನಾಥ್ ಅವರನ್ನು ಸೆರೆ ಹಿಡಿದಿದ್ದಾರೆ.
ಆರೋಗ್ಯ ತಪಾಸಣೆಗಾಗಿ ಬಂದಿದ್ದ ರೋಗಿಯೋರ್ವರ ದೂರಿನ ಅನ್ವಯ ಈ ಕಾರ್ಯಾಚರಣೆ ನಡೆದಿದೆ. ಶಸ್ತ್ರ ಚಿಕಿತ್ಸೆ ನಡೆಸಲು ವೈದ್ಯ ವಿಶ್ವನಾಥ್ ಶಿಂಪಿ ಅವರು 6000 ರೂ ಹಣಕ್ಕಾಗಿ ಬೇಡಿಕೆ ಇಟ್ಟಿದ್ದರು ಎನ್ನಲಾಗಿದೆ ಕೊನೆಗೆ 5000 ರೂಪಾಯಿಗೆ ಒಪ್ಪಿಕೊಂಡು ಶಸ್ತ್ರ ಚಿಕಿತ್ಸೆಗೆ ಒಪ್ಪಿಕೊಂಡಿದ್ದರು ಎನ್ನಲಾಗಿದೆ. ಮೂರು ಸಾವಿರ ರೂಪಾಯಿ ಮೊಬೈಲಿನ ಗೂಗಲ್ ಪೇ ಮೂಲಕ ವರ್ಗಾಯಿಸಿದ್ದ ರೋಗಿಯು ಉಳಿದ ಎರಡು ಸಾವಿರ ರೂಪಾಯಿಗಳನ್ನು ನೀಡುವ ಸಂದರ್ಭದಲ್ಲಿ ಎಸಿಬಿ ಅಧಿಕಾರಿಗಳು ನೇರವಾಗಿ ದಾಳಿ ನಡೆಸಿ ಭ್ರಷ್ಟ ವೈದ್ಯಾಧಿಕಾರಿಯನ್ನು ಸೆರೆ ಹಿಡಿದಿದ್ದಾರೆ.
ಘಟನೆಯ ಕುರಿತಾಗಿ ಎಸಿಬಿ ಅಧಿಕಾರಿಗಳು ಪ್ರಕರಣ ದಾಖಲಿಸಿಕೊಂಡು ಆರೋಪಿಯ ವಿಚಾರಣೆ ನಡೆಸುತ್ತಿದ್ದಾರೆ.

0 Comments