ಚಿಕ್ಕಮಗಳೂರು : (ನ್ಯೂಸ್ ಮಲ್ನಾಡ್ ವರದಿ) ಕರ್ನಾಟಕದ ಮಾಜಿ ಮುಖ್ಯಮಂತ್ರಿಗಳಾದ ಹೆಚ್. ಡಿ ಕುಮಾರಸ್ವಾಮಿ ಅವರ ಹುಟ್ಟುಹಬ್ಬದ ಅಂಗವಾಗಿ ಜಿಲ್ಲೆಯ ಹಲವು ತಾಲೂಕುಗಳಲ್ಲಿ ರೋಗಿಗಳಿಗೆ ಹಾಗೂ ಆಶಾ ಕಾರ್ಯಕರ್ತೆಯರಿಗೆ ನೆರವಾಗುವ ಮೂಲಕ ಜೆಡಿಎಸ್ ಪಕ್ಷವು ಕುಮಾರಸ್ವಾಮಿ ಅವರ ಹುಟ್ಟುಹಬ್ಬವನ್ನು ಆಚರಿಸಿತು.

ಜೆಡಿಎಸ್ ಪಕ್ಷದ ರಾಜ್ಯ ಉಪಾಧ್ಯಕ್ಷರಾದ ಶ್ರೀಯುತ ಸುಧಾಕರ್ ಎಸ್ ಶೆಟ್ಟಿ ಅವರು ಶೃಂಗೇರಿಯ ಆಸ್ಪತ್ರೆಗಳಿಗೆ ಭೇಟಿ ನೀಡಿ ಅಲ್ಲಿನ ರೋಗಿಗಳಿಗೆ ಹಣ್ಣುಗಳನ್ನು ವಿತರಣೆ ಮಾಡಿದರು. ಹಾಗೂ ಶೃಂಗೇರಿಯ ಜಾತ್ಯತೀತ ಜನತಾದಳ ಪಕ್ಷದ ಕಛೇರಿ ಎದುರು ಶೃಂಗೇರಿಯ ಆಟೋ ಚಾಲಕರಿಗೆ ಹಾಗೂ ಆಶಾ ಕಾರ್ಯಕರ್ತೆಯರಿಗೆ ಕುಮಾರಸ್ವಾಮಿ ಅವರ ಹುಟ್ಟುಹಬ್ಬದ ಅಂಗವಾಗಿ ಕುಕ್ಕರ್ ವಿತರಣೆ ಮಾಡಿದರು.

ಈ ಸಂದರ್ಭದಲ್ಲಿ ಶೃಂಗೇರಿ ತಾಲೂಕಿನ ತಾಲೂಕು ಅಧ್ಯಕ್ಷರಾದ ಕಳಸಪ್ಪ ಗೌಡ, ಕಾರ್ಯದರ್ಶಿ ದಿನೇಶ್ ಹೆಗ್ಡೆ, ಜೆಡಿಎಸ್ ಮುಖಂಡರಾದ ಅಣ್ಣಾದೊರೆ,ಯುವ ಮುಖಂಡ ಚೇತನ್ ಗೌಡ, ಜಿ.ಜಿ ಮಂಜುನಾಥ್, ಜಮಾಲ್ ಸಾಬ್, ಇನ್ನಿತರರು ಇದ್ದರು.

ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನಲ್ಲೂ ಕೂಡ ಕುಮಾರಸ್ವಾಮಿ ಅವರ ಹುಟ್ಟುಹಬ್ಬದ ಅಂಗವಾಗಿ ವಿವಿಧ ಕಾರ್ಯಕ್ರಮಗಳನ್ನು ಜೆಡಿಎಸ್ ಪಕ್ಷ ಆಯೋಜನೆ ಮಾಡಿತ್ತು. ಕೊಪ್ಪ ಪಟ್ಟಣದ ಹೊರವಲಯದಲ್ಲಿರುವ ಜೆಡಿಎಸ್ ಪಕ್ಷದ ಕಛೇರಿಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಜೆಡಿಎಸ್ ಪಕ್ಷದ ರಾಜ್ಯ ಉಪಾಧ್ಯಕ್ಷರಾದ ಸುಧಾಕರ್ ಎಸ್ ಶೆಟ್ಟಿ ಅವರು ಪಾಲ್ಗೊಂಡಿದ್ದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು ರಾಜಕೀಯದಲ್ಲಿ ಬದಲಾವಣೆಗಳು ಬಂದಾಗ ಮಾತ್ರ ಅಭಿವೃದ್ದಿ ಸಾಧ್ಯ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಜನಪರವಾದ ಹಲವಾರು ಅತ್ಯುತ್ತಮ ಕೊಡುಗೆಗಳನ್ನು ರಾಜ್ಯದ ಜನರಿಗೆ ನೀಡಿದ್ದಾರೆ. ರೈತರಿಗೆ ಹಾಗೂ  ಸಣ್ಣ ವರ್ಗದ ಜನರಿಗೆ ಕುಮಾರಸ್ವಾಮಿ ಅವರು ನೀಡಿದ ಕೊಡುಗೆ ಅಪಾರ ಇಂದು ಅವರಂತೆಯೇ ಶ್ರಮಿಸುವ ಶ್ರಮಿಕ ವರ್ಗದೊಂದಿಗೆ ಹುಟ್ಟುಹಬ್ಬವನ್ನು ಆಚರಿಸುವ ಯೋಜನೆ ಮಾಡಿದ್ದೇವೆ ಆದ ಕಾರಣ ಕೊರೋನ ಸಂದರ್ಭದಲ್ಲಿ ಬಹಳ ಶ್ರಮವಹಿಸಿದ ಆಶಾ ಕಾರ್ಯಕರ್ತೆಯರು ಹಾಗೂ ಆಟೋ ಚಾಲಕರಿಗೆ ಕುಕ್ಕರ್ ನೀಡುವ ಮೂಲಕ ಹುಟ್ಟುಹಬ್ಬದ ಆಚರಣೆ ನಡೆಸುತ್ತಿದ್ದೇವೆ ಎಂದರು.

ಆಸ್ಪತ್ರೆಯ ಒಳ ರೋಗಿಗಳಿಗೆ ಹಾಲು ಹಣ್ಣು ವಿತರಣೆ ಮಾಡಿದರು ನಂತರ ಈ ಭಾಗದ ಆಶಾ ಕಾರ್ಯಕರ್ತೆಯರಿಗೆ ಕುಕ್ಕರ್ ವಿತರಣೆ ಮಾಡಿದರು.

ಈ ಸಂದರ್ಭದಲ್ಲಿ ಜೆಡಿಎಸ್ ಮುಖಂಡ ಹೆಚ್.ಡಿ ವೆಂಕಟೇಶ್, ಜೆಡಿಎಸ್ ಕ್ಷೇತ್ರಾಧ್ಯಕ್ಷ ದಿವಾಕರ್ ಭಟ್, ನಂದಿನಿ ಸಂತೋಷ್, ಶಿವಾಕರ್ ಶೆಟ್ಟಿ ಫ್ರಾನ್ಸಿಸ್ ಕರ್ಡೋಜ, ಬಿ ಎನ್ ಸುರೇಶ್,ಬದ್ರಿಯಾ ಮೊಹಮ್ಮದ್, ಇನ್ನಿತರ ಮುಖಂಡರು ಹಾಜರಿದ್ದರು.

ಬಾಳೆಹೊನ್ನೂರು ಹಾಗೂ ನರಸಿಂಹರಾಜಪುರ ತಾಲೂಕಿನ ಆಸ್ಪತ್ರೆಗಳಿಗೂ ಭೇಟಿ ನೀಡಿದ ಸುಧಾಕರ್ ಎಸ್ ಶೆಟ್ಟಿ ಅವರು ರೋಗಿಗಳಿಗೆ ಹಣ್ಣು ಹಾಗೂ ಹಾಲು ನೀಡಿದರು ಬಳಿಕ ಅಲ್ಲಿನ ಆಶಾ ಕಾರ್ಯಕರ್ತೆಯರಿಗೆ ಹಾಗೂ ಆಟೋ ಚಾಲಕರಿಗೆ ಪ್ರೆಶರ್ ಕುಕ್ಕರ್ಗಳನ್ನು ನೀಡಿ ಕುಮಾರಸ್ವಾಮಿ ಅವರ ಹುಟ್ಟುಹಬ್ಬವನ್ನು ಆಚರಣೆ ಮಾಡಿದರು.

ಈ ಸಂದರ್ಭದಲ್ಲಿ ಜೆಡಿಎಸ್ ನ ಮುಖಂಡರು ಹಾಗೂ ಪದಾಧಿಕಾರಿಗಳು ಹಾಜರಿದ್ದರು.