ಶಿವಮೊಗ್ಗ : (ನ್ಯೂಸ್ ಮಲ್ನಾಡ್ ವರದಿ) ದಿನಸಿ ಅಂಗಡಿಯೊಂದನ್ನು ಇಟ್ಟುಕೊಂಡು ವ್ಯಾಪಾರ ನಡೆಸುತ್ತಿದ್ದ 32ವರ್ಷದ ಅರ್ಚನಾ ಎಂಬಾಕೆ ಮಧು ಎಂಬ 19 ರ ಹರೆಯದ ಯುವಕನನ್ನು ಪರಿಚಯ ಮಾಡಿಕೊಂಡು ಸ್ನೇಹ ಬೆಳೆಸಿದ್ದಾರೆ. ಆರಂಭದಲ್ಲಿದ್ದ ಸ್ನೇಹ ನಂತರ ಪ್ರೀತಿಗೆ ತಿರುಗಿ ಇಬ್ಬರೂ ಊರನ್ನು ಬಿಟ್ಟು ನಾಪತ್ತೆಯಾಗಿರುವ ಘಟನೆ ಶಿವಮೊಗ್ಗದಲ್ಲಿ ನಡೆದಿದೆ. ಆದರೆ ಹುಡುಗನಿಗೆ 21 ವರ್ಷ ಆಗದ ಕಾರಣ ಫಚೀತಿಗೆ ಸಿಲುಕಿದ್ದಾರೆ.
ಶಿವಮೊಗ್ಗ ಜಿಲ್ಲೆಯ ಮಲ್ಲಿಗೇನಹಳ್ಳಿಯಲ್ಲಿ ದಿನಸಿ ಅಂಗಡಿಯೊಂದನ್ನಿರಿಸಿಕೊಂಡು ವ್ಯಾಪಾರ ಮಾಡುತ್ತಿದ್ದ 32 ವರ್ಷ ಪ್ರಾಯದ ಅರ್ಚನಾ ಎಂಬಾಕೆ ಶಿವಮೊಗ್ಗದ ಮಲ್ಲಿಗೇನಹಳ್ಳಿಯ ನಿವಾಸಿಯಾದ ಮಧು ಎಂಬ ಹದಿಹರೆಯದ ಆಟೋ ಚಾಲನೆ ಮಾಡುತ್ತಿದ್ದ ಯುವಕನನ್ನು ಪ್ರೀತಿಯ ಬಲೆಗೆ ಬೀಳಿಸಿಕೊಂಡು ಇಬ್ಬರೂ ಶಿವಮೊಗ್ಗದಿಂದ ತಮಿಳುನಾಡಿಗೆ ಎಸ್ಕೇಪ್ ಆಗಿದ್ದಾರೆ.
ಈಗಷ್ಟೇ ಉದ್ಯೋಗವನ್ನು ಮಾಡುತ್ತಿರುವ ಮಗನ ಮೇಲೆ ಭರವಸೆಗಳ ಮಹಾಪೂರವನ್ನೇ ಹೊತ್ತಿದ್ದ ಪೋಷಕರು ಆತನ ಉತ್ತಮ ಜೀವನದ ಬಹುದೊಡ್ಡ ಆಸೆಯನ್ನು ಹೊಂದಿದ್ದರು ಆದರೆ ಮಗನು ಇದ್ದಕ್ಕಿದ್ದಂತೆ ಮನೆಯಿಂದ ಹೇಳ ಕೇಳದೆ ಹೊರ ನಡೆದಿರುವುದು ಪೋಷಕರು ಕಣ್ಣೀರಿನಲ್ಲಿ ಕೈ ತೊಳೆಯುವಂತೆ ಮಾಡಿದೆ.
ಮಗ ಮನೆಯಿಂದ ನಾಪತ್ತೆಯಾದ ಸಂದರ್ಭದಲ್ಲಿ ಸ್ನೇಹಿತರೊಂದಿಗೆ ಎಲ್ಲೋ ಪ್ರವಾಸ ಹೋಗಿದ್ದಾನೆ ಬರುತ್ತಾನೆ ಬಿಡು ಎಂದು ಸುಮ್ಮನಿದ್ದ ಪೋಷಕರು, ಕೆಲ ದಿನಗಳು ಕಳೆದರೂ ಮಗ ಬಾರದೇ ಇರುವುದನ್ನು ಕಂಡು ಗಾಬರಿಯಾಗಿ ಪೊಲೀಸರಿಗೆ ಕಂಪ್ಲೇಟ್ ನೀಡಿದ್ದಾರೆ.
ತನಿಖೆ ಆರಂಭಿಸಿದ ಪೋಲೀಸರು ಮಧು ಹಾಗೂ ಅರ್ಚನಾ ಇಬ್ಬರೂ ಕೂಡ ತಮಿಳುನಾಡಿಗೆ ಹೋಗಿ ಮದುವೆಯಾಗಿರುವುದನ್ನು ಪತ್ತೆ ಹಚ್ಚಿದ್ದಾರೆ. ಇಬ್ಬರ ಮದುವೆ ಫೋಟೋಗಳೂ ಕೂಡ ಪೊಲೀಸರಿಗೆ ಲಭ್ಯವಾಗಿದೆ. ಘಟನೆಯ ಕುರಿತಾಗಿ ಇನ್ನೂ ತನಿಖೆ ನಡೆಯುತ್ತಲಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಇತ್ತ ಮಗ ವಾಪಸ್ ಮರಳಿ ಮನೆಗೆ ಬರುತ್ತಾನೆ ಎಂಬ ನಿರೀಕ್ಷೆಯಲ್ಲಿ ಪೋಷಕರಿದ್ದರೆ ಆದರೆ ಮಗ ಮಾತ್ರ ಮದುವೆಯಾಗಿ ಹೆಂಡತಿಯೊಂದಿಗೆ ಆರಾಮಾಗಿ ತಮಿಳುನಾಡಿನಲ್ಲಿ ಜೀವನ ನಡೆಸುತ್ತಿದ್ದಾನೆ.

0 Comments