ಮೂಡಿಗೆರೆ : ಇನ್ನೇನು ಕೆಲವೇ ದಿನಗಳಲ್ಲಿ ಸಮೀಪಿಸುವ ವಿಧಾನ ಪರಿಷತ್ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಎಂ.ಕೆ.ಪ್ರಾಣೇಶ್ ಅಧಿಕ ಮತಗಳ ಅಂತರದಿಂದ ಗೆಲುವು ಸಾಧಿಸಲಿದ್ದಾರೆ ಎಂದು ಮೂಡಿಗೆರೆ ವಿಧಾನಸಭಾ ಕ್ಷೇತ್ರದ ಶಾಸಕ ಎಂ.ಪಿ ಕುಮಾರಸ್ವಾಮಿ ಹೇಳಿದರು.
ಸರಳತೆ ಮತ್ತು ಭ್ರಷ್ಟಾಚಾರ ಮುಕ್ತ ಆಡಳಿತ ನೀಡಿದ ಪ್ರಾಣೇಶ್ ಅವರು ಪುನಃ ವಿಧಾನ ಪರಿಷತ್ ಸದಸ್ಯರಾಗಿ ಆಯ್ಕೆಯಾಗಲಿದ್ದಾರೆ ಎಂದರು. ಇಂದು ಬಾಳೂರು ಹೋಬಳಿಯ ಜಾವಳಿಯಲ್ಲಿ ವಿಧಾನ ಪರಿಷತ್ ಚುನಾವಣೆಗೆ ಎಂ.ಕೆ ಪ್ರಾಣೇಶ್ ಪರ ಮತಯಾಚಿಸಿ ಮಾತನಾಡಿದ ಮೂಡಿಗೆರೆ ಶಾಸಕ ಎಂ.ಪಿ ಕುಮಾರಸ್ವಾಮಿ ಅವರು ಪ್ರಾಣೇಶ್ ತಮ್ಮ ಆರು ವರ್ಷಗಳ ಅವಧಿಯಲ್ಲಿ ಸಮರ್ಥವಾಗಿ ಅನುದಾನ ನೀಡಿದ್ದಾರೆ ಹಾಗೂ ಸಮರ್ಪಕವಾಗಿ ಬಳಸಿದ್ದಾರೆ, ಜಿಲ್ಲೆಯ ಅಭಿವೃದ್ಧಿಗಾಗಿ ಬಿಜೆಪಿ ಗೆಲ್ಲಬೇಕು. ಈ ಬಾರಿ ಅಧಿಕ ಮತದ ಅಂತರದಿಂದ ಪ್ರಾಣೇಶ್ ಅವರು ಗೆಲುವು ಸಾದಿಸಲು ಎಲ್ಲರೂ ಪ್ರಾಣೇಶ ಅವರ ಪರವಾಗಿ ಕೈ ಜೋಡಿಸಬೇಕು ಎಂದರು.
ಈ ಸಂದರ್ಭದಲ್ಲಿ ಬಿಜೆಪಿ ತಾಲೂಕು ಅಧ್ಯಕ್ಷ ರಘು ಜನ್ನಾಪುರ, ಹಳಸೆ ಶಿವಣ್ಣ, ದುಂಡುಗ ಪ್ರಮೋದ್, ಶಶಿಧರ್, ಪರೀಕ್ಷಿತ್ ಜಾವಳಿ, ಪಂಚಾಕ್ಷರಿ, ಗಜೇಂದ್ರ, ಭರತ್ ಬಾಳೂರು, ಮಂಜು ಬಾಳೂರು, ವಿಜೇಂದ್ರ ಮರ್ಕಲ್, ವಿಕ್ರಂ ಬಣಕಲ್, ಕಲ್ಲೇಶ್ ಬಾಳೂರು, ಅರೆಕೂಡಿಗೆ ಶಿವಣ್ಣ, ಡಿ.ಎಸ್. ಸುರೇಂದ್ರ, ಕೆಂಜಿಗೆ ಕೇಶವ್,ಸತೀಶ್ ಬಾಳೂರು ,ಬಾಳೂರು ಹೋಬಳಿಯ ಎಲ್ಲಾ ಗ್ರಾಮ ಪಂಚಾಯಿತಿ ಅಧ್ಯಕ್ಷರು ಮತ್ತು ಸದಸ್ಯರುಗಳು ಪಾಲ್ಗೊಂಡಿದ್ದರು.
ತನು ಕೊಟ್ಟಿಗೆಹಾರ, ವರದಿಗಾರರು.

0 Comments