ಶೃಂಗೇರಿ : (ನ್ಯೂಸ್ ಮಲ್ನಾಡ್ ವರದಿ) ಶೃಂಗೇರಿ ವಿಧಾನಸಭಾ ಕ್ಷೇತ್ರದ ಶಾಸಕರಾದ ಟಿ.ಡಿ ರಾಜೇಗೌಡ ಅವರು ರಾಜ್ಯದ ಗೃಹಮಂತ್ರಿಗಳಾದ ಆರಗ ಜ್ಞಾನೇಂದ್ರ ಅವರಿಗೆ ಶೃಂಗೇರಿ ಕ್ಷೇತ್ರದ ಅಧಿಕಾರಿಯೋರ್ವರ ವರ್ಗಾವಣೆಯ ಕುರಿತಾಗಿ ಬರೆದ ಪತ್ರದ ಕುರಿತಾದ ಇಂದು ಸಿಎಂ ರಾಜಕೀಯ ಕಾರ್ಯದರ್ಶಿ ಡಿ.ಎನ್ ಜೀವರಾಜ್ ಸುದ್ದಿಗೋಷ್ಠಿ ನಡೆಸಿದ್ದಾರೆ.
ಶೃಂಗೇರಿ ವಿಧಾನಸಭಾ ಕ್ಷೇತ್ರದ ಶಾಸಕರಾದ ಟಿ.ಡಿ ರಾಜೇಗೌಡ ಅವರು ಆರಗ ಜ್ಞಾನೇಂದ್ರ ಅವರಿಗೆ ಬರೆದಿರುವ ಪತ್ರದಲ್ಲಿ ಶೃಂಗೇರಿಯ ಓರ್ವ ಅಧಿಕಾರಿಯನ್ನು ವರ್ಗಾವಣೆ ಮಾಡಬೇಕು ಹಾಗೂ ಇಲ್ಲಿಂದ ಬೇರೆಡೆಗೆ ನಿಯೋಜನೆ ಮಾಡಬೇಕು ಇಲ್ಲಿಗೆ ಬೇರೆ ಅಧಿಕಾರಿಗಳ ನಿಯೋಜನೆಮಾಡಬೇಕೆಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಈ ಕುರಿತಾಗಿ ಪ್ರತಿಕ್ರಿಯೆ ನೀಡಿದ ಗೃಹಸಚಿವರು ಕಂದಾಯ ಸಚಿವರಿಗೆ ಪತ್ರ ಬರೆದು ಶಾಸಕರ ದೂರನ್ನು ಪರಿಶೀಲಿಸಿ ಕ್ರಮ ಕೈಗೊಳ್ಳಬೇಕೆಂದು ಆದೇಶಿಸುತ್ತಾರೆ.
ಆದರೆ ಘಟನಾ ನಂತರದಲ್ಲಿ ಈ ಕುರಿತಾಗಿ ಹೇಳಿಕೆ ನೀಡಿರುವ ಶಾಸಕರು ಸಹಿ ನನ್ನದಲ್ಲ ಎಂದು ದಿನಕ್ಕೆ ಒಂದೊಂದು ಸುಳ್ಳನ್ನು ಹೇಳುವುದು ಸರಿಯಲ್ಲ ಎಂದು ಡಿ.ಎನ್ ಜೀವರಾಜ್ ಶಾಸಕರ ವಿರುದ್ಧ ಗುಡುಗಿದ್ದಾರೆ.
ಶಾಸಕರು ತನಿಖೆಯ ವಿಚಾರವಾಗಿ ಮುಂದೆ ಬರಬೇಕು :
ಆಡಳಿತಾತ್ಮಕ ವಿಚಾರ ಆದ ಕಾರಣ ಸೂಕ್ಷ್ಮವಾಗಿ ಇದನ್ನು ಪರಿಗಣನೆಗೆ ಇದನ್ನು ತೆಗೆದುಕೊಳ್ಳಲೇ ಬೇಕಾಗಿರುವುದರಿಂದ ಶಾಸಕರು ತನಿಖೆಗೆ ಮುಂದೆಬರಬೇಕು ಹಾಗೂ ಗೃಹಮಂತ್ರಿಗಳಿಗೆ ಈ ಕುರಿತು ಸಂಪೂರ್ಣ ಮಾಹಿತಿ ನೀಡಲಾಗಿದೆ ಅವರು ಕೂಡ ತನಿಖೆ ನಡೆಸುವಂತೆ ಆದೇಶಿಸಿದ್ದಾರೆ ಎಂದರು. ಕೇವಲ ಸಹಿ ನನ್ನದಲ್ಲ ಲೆಟರ್ ಹೆಡ್ ನನ್ನದಲ್ಲ ಎಂದು ಹೇಳುವ ಶಾಸಕರು ಯಾಕೆ ಸ್ವಯಂ ಪ್ರೇರಿತವಾಗಿ ತನಿಖೆಗೆ ಮುಂದೆ ಬರಲಿಲ್ಲ ಎಂದು ಪ್ರಶ್ನಿಸಿದ್ದಾರೆ.
ಶಾಸಕರು ಬಾಲಿಶ ಹೇಳಿಕೆ ನೀಡುವುದನ್ನು ನಿಲ್ಲಿಸಬೇಕು :
ಅಧಿವೇಶನದ ಅವಧಿಯಲ್ಲಿ ಸಂಪೂರ್ಣವಾಗಿ ಕಸ್ತೂರಿ ರಂಗನ್ ವರದಿಯ ಕುರಿತಾಗಿ ಚರ್ಚೆ ನಡೆದಾಗ ಅವರಿಗೆ ಬಿಡುವಿಲ್ಲ ಜನರ ಜೀವನಕ್ಕೆ ಮಾರಕವಾಗಿರುವ ವರದಿಯ ಕುರಿತು ಗಮನಹರಿಸದೆ ಸಮಯ ವ್ಯರ್ಥ ಮಾಡುವುದು ಹಾಗೂ ಗಂಭೀರ ವಿಚಾರಗಳ ಕುರಿತು ಗಮನಹರಿಸದೇ ಇರುವುದು ಶೋಭೆತರುವುದಿಲ್ಲ ಎಂದರು.
ಅಕ್ರಮ ಸಕ್ರಮ ಸಭೆಯಲ್ಲಿ ಎಲ್ಲಾ ಕಡತಗಳು ಅರಣ್ಯ ಇಲಾಖೆಯ ಅನುಮತಿಯನ್ನು ಪಡೆಯಲೇಬೇಕೆಂದು ನಿರ್ಣಯ ಮಾಡುವ ಶಾಸಕರು ಸದನದಲ್ಲಿ ಬೇರೆಯೇ ಮಾತನಾಡುತ್ತಾರೆ ನಿಯಮಾವಳಿಗಳನ್ನು ಇವರೇ ರಚನೆ ಮಾಡಿ ಕಂದಾಯ ಸಚಿವರನ್ನು ಪ್ರಶ್ನಿಸುತ್ತಾರೆ ಇದು ಅವರನ್ನು ಮಾತ್ರ ಮುಜುಗರಕ್ಕೆ ತರುವುದಿಲ್ಲ ಕ್ಷೇತ್ರದ ಜನರನ್ನೂ ಕೂಡ ಮುಜುಗರಕ್ಕೀಡುಮಾಡುತ್ತದೆ. ಆದ ಕಾರಣ ಶಾಸಕ ರಾಜೇಗೌಡ ಗಮನವಿಟ್ಟು ಮಾತನಾಡಬೇಕು ಎಂದರು.

0 Comments