ಕೊಪ್ಪ : (ನ್ಯೂಸ್ ಮಲ್ನಾಡ್ ವರದಿ) ಲಂಚ ಸ್ವೀಕರಿಸುತ್ತಿದ್ದ ಓರ್ವ ಕಂದಾಯ ನಿರೀಕ್ಷಕನನ್ನು ಎಸಿಬಿ ಅಧಿಕಾರಿಗಳು ದಾಳಿ ನಡೆಸಿ ವಶಕ್ಕೆ ಪಡೆದಿರುವ ಘಟನೆ ಬೆಳಕಿಗೆ ಬಂದಿದೆ.
ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲ್ಲೂಕಿನ ಬಾಳಗಡಿಯಲ್ಲಿರುವ ತಾಲೂಕು ಕಛೇರಿಯಲ್ಲಿ ಹರಿಹರಪುರ ಕಂದಾಯ ನಿರೀಕ್ಷಕ ಕಿರಣ್ ಎಂಬಾತ ಮಹಿಳೆಯೋರ್ವರಿಂದ ಲಂಚ ಸ್ವೀಕರಿಸುತ್ತಿದ್ದಾಗ ಎಸಿಬಿ ಅಧಿಕಾರಿಗಳು ತಕ್ಷಣ ದಾಳಿ ನಡೆಸಿ ಅಧಿಕಾರಿಯನ್ನು ವಶಕ್ಕೆಪಡೆದಿದ್ದಾರೆ.
ಈ ಹಿಂದೆ ಗ್ರಾಮಸ್ಥರೋರ್ವರ ಜಾಗದ ದಾಖಲೆಗಳನ್ನು ಮಾಡಿಕೊಡಲು ಕೂಡ ಲಂಚಕ್ಕೆ ಬೇಡಿಕೆಯಿಟ್ಟಿದ್ದಾರೆ ಎಂಬ ಆರೋಪವೂ ಕಂದಾಯ ನಿರೀಕ್ಷಕ ಕಿರಣ್ ಮೇಲಿದೆ.
ಮಹಿಳೆಯೋರ್ವರ ಬಳಿ ತಾಲೂಕು ಕಛೇರಿಯಲ್ಲಿ ಆರುಸಾವಿರ ಹಣವನ್ನು ಪಡೆಯುವಾಗ ದಾಳಿ ನಡೆಸಿದ ಎಸಿಬಿ ಅಧಿಕಾರಿಗಳು ದಾಖಲೆ ಸಮೇತ ಆರೋಪಿಯನ್ನು ಸೆರೆಹಿಡಿದಿದ್ದಾರೆ.
ಈ ದಾಳಿಯಲ್ಲಿ ಎಸಿಬಿ ಡಿ ವೈ ಎಸ್ ಪಿ ಗೀತಾ, ಎ.ಜಿ ರಾಥೋಡ್, ಇನ್ಸ್ಪೆಕ್ಟರ್ ಮಂಜುನಾಥ್, ವೇದಾವತಿ, ಪ್ರಕಾಶ್, ದೇವರಾಜ್, ಹಾಗೂ ಸಿಬ್ಬಂದಿಗಳಾದ ಮುಜೀಬ್, ಸತೀಶ್, ಅನಿಲ್ ನಾಯಕ್, ಜಯಕುಮಾರ್, ರವಿಚಂದ್ರ ಈ ಪ್ರಕರಣದ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದರು ಎಂದು ತಿಳಿದುಬಂದಿದೆ.

0 Comments