ಕೊಡಗು : (ನ್ಯೂಸ್ ಮಲ್ನಾಡ್ ವರದಿ) ತೋಟದಲ್ಲಿ ಕೃಷಿ ಕೆಲಸ ಮಾಡುವಾಗ ಯುವಕನೊಬ್ಬ ವಿದ್ಯುತ್ ತಂತಿ ಸ್ಪರ್ಶಿಸಿ ದುರ್ಮರಣ ಹೊಂದಿದ ಘಟನೆ ಕೊಡಗು ಜಿಲ್ಲೆಯ ಪೊನ್ನಂಪೇಟೆ ತಾಲೂಕಿನಲ್ಲಿ ನಡೆದಿದೆ.

ತೋಟದಲ್ಲಿ ಕಾಳುಮೆಣಸು ಕೊಯ್ಲು ಮಾಡುವಾಗ ಕಬ್ಬಿಣದ ಏಣಿಗೆ ವಿದ್ಯುತ್ ತಂತಿ ತಗುಲಿ ಈ ದುರ್ಘಟನೆ ಸಂಭವಿಸಿದೆ ಎಂದು ತಿಳಿದುಬಂದಿದೆ. ಮೃತ ಹೊಂದಿದ ಯುವಕನನ್ನು ಪೊನ್ನಂಪೇಟೆ ತಾಲೂಕಿನ ಬಿ ಶೆಟ್ಟಿಗೇರಿ ಗ್ರಾಮದ ನಾಮೆರ ದಿನೇಶ್ ಎಂದು ಗುರುತಿಸಲಾಗಿದೆ. ಯುವಕನು 22 ವರ್ಷ ಪ್ರಾಯದವನಾಗಿದ್ದು ಉತ್ಸುಕತೆಯಿಂದ ಕೃಷಿ ಮಾಡುವಾಗ ಈ ಘಟನೆ ನಡೆದಿದೆ. 

ಯುವಕನ ಸಾವಿನ ಸುದ್ದಿಯನ್ನು ತಿಳಿದ ಪೋಷಕರು ಅತೀವ ಬೇಸರವನ್ನು ವ್ಯಕ್ತಪಡಿಸಿದ್ದಾರೆ, ಬೆಳಗ್ಗೆ ತೋಟಕ್ಕೆ ತೆರಳಿದವನನ್ನು ಈಗ ಈ ಪರಿಸ್ಥಿತಿಯಲ್ಲಿ ನೋಡುತ್ತಿದ್ದೇವೆ, ಮರಳಿ ಪಡೆಯಲಾಗಲಿಲ್ಲ ಎಂದು ದುಃಖ ಹೊರಹಾಕಿದ್ದಾರೆ. ಸುತ್ತಮುತ್ತಲಿನ ಗ್ರಾಮಗಳ  ಗ್ರಾಮಸ್ಥರು ಕೂಡ ಘಟನಾ ಸ್ಥಳಕ್ಕೆ ಆಗಮಿಸುತ್ತಿದ್ದಾರೆ.