ಜಯಪುರ : (ನ್ಯೂಸ್ ಮಲ್ನಾಡ್ ವರದಿ) ಮಸೀದಿ ಹಿಂಭಾಗದಲ್ಲಿ ಮಣ್ಣು ತೆಗೆಯುವಾಗ ಟ್ರ್ಯಾಕ್ಟರ್ ಒಂದು ಪಲ್ಟಿಯಾದ ಪರಿಣಾಮ ಸ್ಥಳದಲ್ಲೇ ಟ್ರ್ಯಾಕ್ಟರ್ ಚಾಲಕ ಸಾವನ್ನಪ್ಪಿದ ದುರ್ಘಟನೆ ಮಲೆನಾಡಿನಲ್ಲಿ ಸಂಭವಿಸಿದೆ.
ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ಜಯಪುರದ ಮಸೀದಿಯ ಹಿಂಭಾಗದಲ್ಲಿ ಮಣ್ಣಿನ ಕೆಲಸ ಮಾಡುವ ಸಂದರ್ಭದಲ್ಲಿ ಟ್ರ್ಯಾಕ್ಟರ್ ಚಾಲಕನ ನಿಯಂತ್ರಣ ತಪ್ಪಿ ಈ ಅವಘಡ ಸಂಭವಿಸಿದೆ ಎಂದು ತಿಳಿದುಬಂದಿದೆ.
ಮಸೀದಿಯ ಹಿಂಭಾಗದಲ್ಲಿ ಮೂರ್ನಾಲ್ಕು ಟ್ರ್ಯಾಕ್ಟರ್ ಗಳು ಮಣ್ಣನ್ನು ತೆಗೆದುಕೊಂಡು ಬೇರೆಡೆಗೆ ಸಾಗಾಟ ನಡೆಸುತ್ತಿತ್ತು. ಈ ಮಧ್ಯದಲ್ಲಿ ದುರ್ಘಟನೆ ಸಂಭವಿಸಿದ್ದು ಟ್ರ್ಯಾಕ್ಟರ್ ಪಲ್ಟಿಯಾದ ಸ್ಥಳದಲ್ಲೇ ಚಾಲಕ ರಫೀಕ್ ಎಂಬಾತ ಸಾವನ್ನಪ್ಪಿದ್ದಾನೆ.
ಮೃತಪಟ್ಟ ವ್ಯಕ್ತಿಯನ್ನು ಕೂಲಿ ಕಾರ್ಮಿಕ ರಫೀಕ್ ಎಂದು ಗುರುತಿಸಲಾಗಿದೆ. ರಫೀಕ್ ಮಕ್ಕಿಕೊಪ್ಪದ ನಿವಾಸಿಯಾಗಿದ್ದು ಜಯಪುರದ ಮಸೀದಿಯ ಹಿಂಭಾಗದಲ್ಲಿ ಮಣ್ಣು ತೆಗೆಯುವ ಕೆಲಸವನ್ನು ಮಾಡುವಾಗ ಸಾವನ್ನಪ್ಪಿದ್ದಾರೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಘಟನೆಯ ಕುರಿತಾಗಿ ಮಾಹಿತಿ ಕಲೆಹಾಕುತ್ತಿದ್ದಾರೆ.

0 Comments