ನರಸಿಂಹರಾಜಪುರ : (ನ್ಯೂಸ್ ಮಲ್ನಾಡ್ ವರದಿ) ಪ್ರೀತಿ ಆರಂಭವಾದರೆ ಎಂತವರೂ ಕೂಡ ವಶವಾಗುತ್ತಾರೆ ಎಂಬುದಕ್ಕೆ ಸಾಕ್ಷಿಯಾಗಿ ಪ್ರೇಮಿಗಳಿಬ್ಬರು ಆತ್ಮಹತ್ಯೆ ಮಾಡಿಕೊಂಡ ಘಟನೆ ನರಸಿಂಹರಾಜಪುರದಲ್ಲಿ ನಡೆದಿದೆ. 

ಚಿಕ್ಕಮಗಳೂರು ಜಿಲ್ಲೆಯ ನರಸಿಂಹರಾಜಪುರ ತಾಲೂಕಿನ ಅಳೀಹಳ್ಳಿ ಹಾಗೂ ವಗಡೆಯಲ್ಲಿ ನಡೆದಿದೆ. ರಾಜೇಶ್ ಹಾಗೂ ಚಾಂದಿನಿ ಇಬ್ಬರು ಮೃತಪಟ್ಟ ಪ್ರೇಮಿಗಳು ಎಂದು ತಿಳಿದುಬಂದಿದೆ.

ಸಂಬಂಧಿಗಳೇ ಆಗಿದ್ದ ಚಾಂದಿನಿ ಹಾಗೂ ರಾಜೇಶ್ ಪ್ರೀತಿಸುತ್ತಿದ್ದರು. ಕೆಲ ದಿನಗಳ ಹಿಂದೆ ಮನೆಯಲ್ಲಿ ವಿಷ ಕುಡಿದು ತೀವ್ರ ಅಸ್ವಸ್ಥನಾಗಿದ್ದಾನೆ ಆತನನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಿದರೂ ಕೂಡ ಚಿಕಿತ್ಸೆ ಫಲಿಸದೇ ರಾಜೇಶ್ ಮೃತಪಟ್ಟಿದ್ದಾನೆ. 

ಈ ವಿಷಯವನ್ನು ತಿಳಿದ ಚಾಂದಿನಿ ಮನೆಯಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾಳೆ. ಈಕೆಯ ತಾಯಿ ಶಾಲೆಯಲ್ಲಿ ಬಿಸಿಯೂಟ ತಯಾರಿಸುವ ಸಿಬ್ಬಂದಿ, ಅವರು ಮನೆಗೆ ಬಂದು ನೋಡಿದಾಗ ಚಾಂದಿನಿ ನೇಣು ಹಾಕಿಕೊಂಡಿರುವುದು ಬೆಳಕಿಗೆ ಬಂದಿದೆ. ಮನೆಯಲ್ಲಿ ಡೆತ್ ನೋಟ್ ಬರೆದಿಟ್ಟ ಚಾಂದಿನಿ, ರಾಜೇಶ ಹಾಗೂ ನಾನು ಪ್ರೀತಿಸುತ್ತಿದ್ದು ಒಬ್ಬರನ್ನೊಬ್ಬರು ಬಿಟ್ಟಿರುವ ಶಕ್ತಿ ಇಲ್ಲ ಆದಕಾರಣ ಆತ್ಮಹತ್ಯೆಗೆ ಶರಣಾಗಿದ್ದೇನೆ ದಯವಿಟ್ಟು ಕ್ಷಮಿಸಿ ಅಮ್ಮ ಎಂದು ಡೆತ್ ನೋಟ್ ನಲ್ಲಿ ಬರೆದಿದ್ದಾಳೆ.

ಈ ಕುರಿತು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು ತನಿಖೆ ನಡೆಸುತ್ತಿದ್ದಾರೆ.