ಮಲೆನಾಡು : (ನ್ಯೂಸ್ ಮಲ್ನಾಡ್ ವರದಿ) ಮಲೆನಾಡು ಭಾಗದ ರೈತರು ನಿರಂತರವಾಗಿ ಎದುರಿಸುತ್ತಿರುವ ಅಡಿಕೆ ಬೆಳೆಯ ಸಮಸ್ಯೆಗಳನ್ನು ಸದನದಲ್ಲಿ ಎತ್ತಿ ಹಿಡಿದರು.
ಮಲೆನಾಡು ಹಾಗೂ ಕರಾವಳಿ ಭಾಗದಲ್ಲಿ ಅಡಿಕೆಬೆಳೆಯ ಕುರಿತಾದ ಸಂಶೋಧನಾಲಯವಿದ್ದರೂ ಕೂಡ ಅಲ್ಲಿ ವಿಜ್ಞಾನಿಗಳನ್ನು ನಿಯೋಜಿಸಿಲ್ಲ. ಇದು ಸರ್ಕಾರದ ಹೊಣೆಗಾರಿಕೆಯಾಗಿದೆ. ಅಡಿಕೆ ಬೆಳೆಯನ್ನು ನಂಬಿ ಜೀವನ ನಿರ್ವಹಣೆ ಮಾಡುತ್ತಿರುವ ರೈತ ಈಗಾಗಲೇ ಬಹಳಷ್ಟು ನಷ್ಟ ಹೊಂದಿದ್ದಾನೆ ಆತನ ಜೀವನೋಪಾಯಕ್ಕೆ ಯಾರೂ ಕೂಡ ಪರಿಹಾರ ನೀಡುವುದಿಲ್ಲ ಎಂದರು.
ಮನಮೋಹನ್ ಸಿಂಗ್ ಅವರ ಅವಧಿಯಲ್ಲಿ ಈ ಕುರಿತಾಗಿ ಮನವಿ ಸಲ್ಲಿಸಿದಾಗ ಅದಕ್ಕೆ ಪೂರಕವಾಗಿ ಪ್ರತಿಕ್ರಿಯಿಸಿ ಸಮಿತಿಯೊಂದನ್ನು ರಾಜ್ಯಕ್ಕೆ ಕಳುಹಿಸಿ ವಸ್ತುಸ್ಥಿತಿಯನ್ನು ಗಮನಿಸಿ ಪೂರಕ ಬೆಳೆಗಳ ಕುರಿತಾಗಿ ಮಾಹಿತಿಯನ್ನು ನೀಡಿದ್ದರು ಎಂದರು.
ಮುಂಬರುವ ದಿನಗಳಲ್ಲಿ ಆದಷ್ಟು ಶೀಘ್ರವಾಗಿ ಕೇಂದ್ರಕ್ಕೆ ಈ ಕುರಿತು ತಿಳಿಸಿ ಹೆಚ್ಚಿನ ಪರಿಹಾರ ಹಾಗೂ ಅನುದಾನವನ್ನು ವಾಣಿಜ್ಯ ಬೆಳೆಯನ್ನು ನಂಬಿ ಜೀವನ ನಡೆಸುತ್ತಿರುವ ರೈತರ ಪರವಾಗಿ ಶೀಘ್ರವೇ ಗಮನಹರಿಸಬೇಕು ಎಂದರು. ಒಂದುವೇಳೆ ಆಗದೇ ಹೋದಲ್ಲಿ ರೈತರ ಬದುಕು ದುಸ್ತರವಾಗುತ್ತದೆ ಎಂದರು.

0 Comments