ಹಾಸನ : (ನ್ಯೂಸ್ ಮಲ್ನಾಡ್ ವರದಿ)  ಹಾಸನ ಮಂಗಳೂರು ಜಿಲ್ಲೆಗಳಿಗೆ ಬೆಂಗಳೂರು ತಲುಪಲು ಮಾರ್ಗವಾಗಿರುವ ಶಿರಾಡಿ ಘಾಟ್ ನ ಸಮೀಪದಲ್ಲಿ ಮುಂಜಾನೆ ಎರಡು ಬಸ್ ಗಳ ಮಧ್ಯೆ ಅಪಘಾತ ಸಂಭವಿಸಿದೆ.

ರಾತ್ರಿಯ ವೇಳೆಯಲ್ಲಿ ಸಂಚರಿಸುವ ಮಾಸ್ಟರ್ ಹಾಗೂ ದುರ್ಗಾಂಬ ಬಸ್ ಗಳ ನಡುವೆ ಇಂದು ಮುಂಜಾನೆ ಶಿರಾಡಿ ಘಾಟಿಯ ಸಮೀಪದ ಅಳೂರಿನಲ್ಲಿ ಅಪಘಾತ ಸಂಭವಿಸಿದೆ.

ಬೆಳಗಿನ ಜಾವ 2: 30 ರ ಆಸುಪಾಸಿನಲ್ಲಿ ಈ ಅಪಘಾತ ನಡೆದಿದೆ ಎಂದು ಅಂದಾಜಿಸಲಾಗಿದೆ. ಬಸ್ಸಿನ ಚಾಲಕ ಹಾಗೂ ಕಂಡಕ್ಟರ್ ಗೆ ಸಣ್ಣಪುಟ್ಟ ಗಾಯಗಳಾಗಿದೆ ಎಂದು ತಿಳಿದುಬಂದಿದೆ. ಈ  ಹಿಂದೆಯೂ ಕೂಡ ಕೆಲ ಅಪಘಾತಗಳು ಶಿರಾಡಿ ಘಾಟಿಯ ಆಸುಪಾಸಿನಲ್ಲಿ ನಡೆದಿವೆ. ಪ್ರಸ್ತುತ ಅಪಘಾತವಾದ ಸ್ಥಳದಲ್ಲಿಯೇ ಬಸ್ಸುಗಳಿದೆ ಎಂದು ಮಾಹಿತಿ ಲಭ್ಯವಾಗಿದೆ.