ಚಿಕ್ಕಮಗಳೂರು :(ನ್ಯೂಸ್ ಮಲ್ನಾಡ್ ವರದಿ) ಚಿಕ್ಕಮಗಳೂರು ನಗರಸಭಾ ಚುನಾವಣೆಯ ಫಲಿತಾಂಶವು ಹೊರಬಿದ್ದಿದ್ದು ಬಿಜೆಪಿಯು 18 ಸ್ಥಾನಗಳನ್ನು ಗೆಲ್ಲುವ ಮೂಲಕ ಈ ಬಾರಿ ನಗರಸಭೆಯ ಆಡಳಿತದ ಚುಕ್ಕಾಣಿಯನ್ನು ಹೆಗಲಿಗೇರಿಸಿಕೊಂಡಿದೆ. ಆದರೆ ಚಿಕ್ಕಮಗಳೂರು ಜಿಲ್ಲೆಯಲ್ಲಿ ಖಾತೆ ತೆರೆದಿರುವ ಸೋಶಿಯಲ್ ಡೆಮಾಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್ಡಿಪಿಐ) ಪಾರ್ಟಿಯು ಚಿಕ್ಕಮಗಳೂರನ್ನು ಅಯೋಧ್ಯೆಯಾಗಲು ಬಿಡುವುದಿಲ್ಲ ಮುಂದಿನ ದಿನಗಳಲ್ಲಿ ಎಂಎಲ್ಎ ಚುನಾವಣೆಗೂ ಸ್ಪರ್ಧಿಸಿ ಅಧಿಕಾರವನ್ನು ಪಡೆಯುತ್ತೇವೆಂದು ಶಾಸಕ ಸಿಟಿ ರವಿ ಅವರಿಗೆ ಎಚ್ಚರಿಕೆ ಸಂದೇಶಿಸಿದೆ.
ಈ ಕುರಿತಾಗಿ ಮಾತನಾಡಿರುವ ಎಸ್ಡಿಪಿಐ ಮುಖಂಡ ಇಡೀ ಚಿಕ್ಕಮಗಳೂರನ್ನು ಇನ್ನೊಂದು ಅಯೋಧ್ಯೆಯನ್ನಾಗಿ ಮಾಡಲು ಹೊರಟಿರುವ ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ಅವರಿಗೆ ಇದೊಂದು ಎಚ್ಚರಿಕೆಯ ಘಂಟೆಯಾಗಿದೆ, ಇಂದು ಕೇವಲ ಒಂದು ವಾರ್ಡಿನಲ್ಲಿ ಗೆಲುವು ಸಾಧಿಸಿದ್ದೇವೆ ಮುಂದಿನ ದಿನಗಳಲ್ಲಿ ಅತಿಹೆಚ್ಚಿನ ವಾರ್ಡುಗಳಲ್ಲಿ ಎಸ್ಡಿಪಿಐ ಬೆಂಬಲಿತ ಅಭ್ಯರ್ಥಿಗಳನ್ನು ನಿಲ್ಲಿಸಿ ಗೆಲ್ಲಿಸುತ್ತೇವೆ ಕಾಫಿನಾಡು ಇನ್ನೊಂದು ಅಯೋಧ್ಯೆಯಾಗಲು ಬಿಡುವುದಿಲ್ಲ ಎಂದಿದ್ದಾರೆ.
ಚಿಕ್ಕಮಗಳೂರು ಜಿಲ್ಲೆಯ ನಗರಸಭೆಯ ಆಡಳಿತವನ್ನು ಮಾತ್ರ ಕೈವಶಮಾಡಿಕೊಳ್ಳದೆ ಮುಂದಿನ ದಿನಗಳಲ್ಲಿ ಎಂಎಲ್ಎ ಆಗಿಯೂ ಎಸ್ಡಿಪಿಐ ನ ಸದಸ್ಯರು ಹೊರ ಬರಲಿದ್ದಾರೆ ಎಂದರು.

0 Comments