ಕೊಟ್ಟಿಗೆಹಾರ : ರಾಜ್ಯದಾದ್ಯಂತ ಒಮಿಕ್ರಾನ್ ಸೋಂಕು ಹಾಗೂ ಕೊರೋನಾ ಸೋಂಕಿನ ಹರಡುವಿಕೆಯನ್ನು ತಡೆಗಟ್ಟುವ ನಿಟ್ಟಿನಲ್ಲಿ ನೈಟ್ ಕರ್ಫ್ಯೂ ಜಾರಿಗೊಳಿಸಲಾಗಿದೆ. ನಿಯಮಾವಳಿಗಳನ್ನು ಸರ್ಕಾರ ಹೇರಿದ್ದರೂ ಕೂಡ ಕೆಲ ಪ್ರದೇಶಕ್ಕಷ್ಟೇ ಈ ನಿಯಮಾವಳಿಗಳು ಸೀಮಿತವಾಗಿದೆ ನಿಯಮಾವಳಿಗಳನ್ನು ಪಾಲಿಸದೆ ವಾಹನ ಸವಾರರು ಹಾಗೂ ಅಂಗಡಿ ಮಾಲೀಕರು ತಮ್ಮ ಕೆಲಸಗಳನ್ನು ಮುಂದುವರೆಸಿರುವ ಘಟನೆ ಬೆಳಕಿಗೆ ಬಂದಿದೆ.
ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರದಲ್ಲಿ ಸರ್ಕಾರದ ನಿಯಮಾವಳಿಗಳನ್ನು ಗಾಳಿಗೆ ತೂರಿ ರಾತ್ರಿ 11:00 ಗಂಟೆಯಾದರೂ ಕೂಡ ಪ್ರವಾಸಿಗರು ಅತ್ತಿಂದಿತ್ತ ಸಂಚಾರ ಮಾಡುತ್ತಾ ಸರ್ಕಾರದ ಆದೇಶವನ್ನು ಉಲ್ಲಂಘಿಸಿದ್ದಾರೆ.
ಒಂದುಬಾರಿ ಅಂಗಡಿ ಮುಂಗಟ್ಟುಗಳ ಬಾಗಿಲು ಹಾಕಿಸಿ ಬಂದಮೇಲೂ ಪೊಲೀಸರ ಕಣ್ತಪ್ಪಿಸಿ ಅಂಗಡಿ ಬಾಗಿಲು ತೆರೆದು ವ್ಯಾಪಾರ ನಡೆಸುತ್ತಿರುವುದು ನಮ್ಮ ಗಮನಕ್ಕೂ ಬಂದಿದೆ. ಇಂದಿನಿಂದ ಪೊಲೀಸ್ ಇಲಾಖೆ ಈ ಕುರಿತು ಕಠಿಣ ಕಾನೂನು ಕ್ರಮಗಳನ್ನು ಕೈಗೊಳ್ಳಲಿದೆ. - ಗಾಯತ್ರಿ, PSI, ಬಣಕಲ್ ಪೊಲೀಸ್ ಠಾಣೆ.
ಕ್ರಿಸ್ಮಸ್ ಹಾಗೂ ಹೊಸ ವರ್ಷದ ಹಿನ್ನೆಲೆಯಲ್ಲಿ ಕಾಫಿನಾಡು ಚಿಕ್ಕಮಗಳೂರಿನಾದ್ಯಂತ ಪ್ರವಾಸಿಗರ ದಂಡು ಹರಿದು ಬರುತ್ತಿದೆ. ರಾತ್ರಿ ಹತ್ತು ಗಂಟೆಯ ನಂತರ ವ್ಯಾಪಾರ ವಹಿವಾಟುಗಳು ಸೇರಿದಂತೆ ವಾಹನ ಸಂಚಾರಕ್ಕೂ ಸರ್ಕಾರ ನಿಷೇಧ ಹೇರಿದೆ, ಆದರೆ ಯಾವುದೇ ಭಯವಿಲ್ಲದೆ ನಿರಾತಂಕವಾಗಿ ಪ್ರವಾಸಿಗರು ವ್ಯವಹರಿಸುತ್ತಿರುವುದು ಸಾರ್ವಜನಿಕ ವ್ಯವಸ್ಥೆಯ ಕುರಿತಾಗಿ ಪ್ರಶ್ನೆ ಮಾವ ಮೂಡಿಸಲಾರಂಭಿಸಿದೆ.
ರಾಜ್ಯದ ಹಲವೆಡೆಗಳಲ್ಲಿ ಹತ್ತು ಗಂಟೆಯ ನಂತರ ಅನಗತ್ಯವಾಗಿ ಸುತ್ತಾಡುವ ವಾಹನಗಳನ್ನು ಸೀಜ್ ಮಾಡಲಾಗುತ್ತಿದೆ ಆದರೆ ಕಾಫಿನಾಡಿನ ಕೆಲವೆಡೆ ಈ ಕುರಿತಾಗಿ ಅಗತ್ಯ ಕ್ರಮಗಳನ್ನು ಕೈಗೊಳ್ಳದೆ ಇರುವುದು ಬರುವವರಲ್ಲಿ ಭಯ ಹುಟ್ಟಿಸದೆ ಸೋಂಕನ್ನು ಇನ್ನಷ್ಟು ಹೆಚ್ಚಿಸುವಲ್ಲಿ ಕಾರಣವಾಗುತ್ತಿದೆ.
ಕಾಫಿ ನಾಡಿನಲ್ಲಿ ಕೊರೋನಾ ಪ್ರಕರಣಗಳು ಹೆಚ್ಚಾದಲ್ಲಿ ಪ್ರವಾಸಿಗರೇ ಮುಖ್ಯ ಕಾರಣರಾಗುತ್ತಾರೆ, ಇಲ್ಲ ಈ ಕುರಿತಾಗಿ ಪೊಲೀಸರು ಹೆಚ್ಚಿನ ಗಮನಹರಿಸಿ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕೆಂದು ಸಾರ್ವಜನಿಕರು ಕೋರಿದ್ದಾರೆ.
ತನು ಕೊಟ್ಟಿಗೆಹಾರ, ವರದಿಗಾರರು.

0 Comments