ಕೊಡಗು : (ನ್ಯೂಸ್ ಮಲ್ನಾಡ್ ವರದಿ) ಮನೆಯಲ್ಲಿ ಕಲಹ ಉಂಟಾಗಿದೆ, ಶಾಂತಿಯೇ ಇಲ್ಲ ದಯಮಾಡಿ ಶೀಘ್ರವಾಗಿ ನಮ್ಮ ಸಮಸ್ಯೆಯನ್ನು ಪರಿಹರಿಸಿ ಎನ್ನುತ್ತಾ ಜ್ಯೋತಿಷಿಯನ್ನೇ ದಂಪತಿಗಳು ಸಮಸ್ಯೆಗೆ ಸಿಲುಕಿಸಿದ ಘಟನೆ ಬೆಳಕಿಗೆ ಬಂದಿದೆ.
ದಾಂಪತ್ಯ ಕಲಹ ಉಂಟಾಗಿದೆ ದಯಮಾಡಿ ಪರಿಹರಿಸಿ ಎಂದು ಚಿಕ್ಕಮಗಳೂರು ಮೂಲದ ಜ್ಯೋತಿಷಿಯನ್ನು ಪುಸಲಾಯಿಸಿ ತಮ್ಮ ಬಾಡಿಗೆ ಮನೆಗೆ ಅವರನ್ನು ಕರೆಸಿ ಅವರ ಜೊತೆಗೆ ಫೋಟೋ ಹಾಗೂ ವೀಡಿಯೋಗಳನ್ನು ತೆಗೆದುಕೊಂಡು ಅವರಿಗೆ ಬೆದರಿಸುವ ಕೆಲಸವನ್ನು ಮಾಡಿದ ಕೊಡಗು ಜಿಲ್ಲೆಯ ಭವ್ಯ ಹಾಗೂ ಅರಕಲಗೂಡಿನ ಕುಮಾರ್ ಎಂಬ ಖತರ್ನಾಕ್ ದಂಪತಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಹಲವಾರು ಬಾರಿ ಹಣಕ್ಕೆ ಬೇಡಿಕೆಯಿಟ್ಟು ಮಹಿಳಾ ಸಂಘಟನೆ, ಪೊಲೀಸ್ ಸಬ್ ಇನ್ಸ್ಪೆಕ್ಟರ್ ಹೆಸರಿನಲ್ಲಿ ಹಾಗೂ ಇನ್ನಿತರರ ಹೆಸರಿನಲ್ಲಿ ಪುರೋಹಿತರಿಗೆ ಬ್ಲ್ಯಾಕ್ ಮೇಲ್ ಮಾಡುತ್ತಿದ್ದರು ಎಂಬ ಆರೋಪ ಕೇಳಿ ಬಂದಿದೆ. ಈಗಾಗಲೇ ಹದಿನೈದು ಲಕ್ಷ ನಗದು ಹಾಗೂ ಬೇರೆ ಬೇರೆ ಖಾತೆಗಳಿಂದ 34 ಲಕ್ಷ ರೂ ಹಣವನ್ನು ಪೀಕಿದ್ದಾರೆ ಎಂದು ಜ್ಯೋತಿಷಿ ಆರೋಪಿಸಿದ್ದಾರೆ.
ಇದನ್ನೂ ಓದಿ :ಕಾಫಿನಾಡಿನಲ್ಲಿ ಭೀಕರ ಅಗ್ನಿ ಅವಘಡ; ಹೊತ್ತಿ ಉರಿದ ಮೂರು ಎಕರೆ ಅಡಿಕೆ ತೋಟ
ಈ ಕುರಿತು ಖತರ್ನಾಕ್ ದಂಪತಿಗಳನ್ನು ಬಂಧಿಸಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ ಸಂಪೂರ್ಣ ತನಿಖೆಯ ನಂತರವಷ್ಟೇ ಘಟನೆಯ ಕುರಿತಾದ ಸಂಪೂರ್ಣ ಮಾಹಿತಿ ಹಾಗೂ ವಿವರಗಳು ಲಭಿಸಬೇಕಿದೆ.

0 Comments