ಶೃಂಗೇರಿ : (ನ್ಯೂಸ್ ಮಲ್ನಾಡ್ ವರದಿ) ಶೃಂಗೇರಿಯಲ್ಲಿ ಈ ಹಿಂದೆ ನಡೆದ ಹಕ್ಕು ಪತ್ರ ಕುರಿತಾದ ಹಗರಣದಲ್ಲಿ ತಹಶೀಲ್ದಾರ್ ಸೇರಿದಂತೆ ಇಬ್ಬರ ಮೇಲೆ ಪ್ರಕರಣ ದಾಖಲಾಗಿದ್ದು, ಇತರೆ ಮೂವರು ಅಧಿಕಾರಿಗಳು ಅಮಾನತುಗೊಂಡಿದ್ದರು, ಆ ನಂತರ ಹಕ್ಕುಪತ್ರ ಪಡೆದ ಕೆಲವರಲ್ಲಿ ಅನೇಕ ಗೊಂದಲಗಳು ವ್ಯಕ್ತವಾಗಿದ್ದವು.
ಈ ಕುರಿತಂತೆ ಪ್ರವೀಣ್ ಎಂಬುವವರು ಮಾಹಿತಿ ಹಕ್ಕು ಅಡಿಯಲ್ಲಿ ಮಾಹಿತಿ ಕೇಳಿದ್ದಾಗ ಶೃಂಗೇರಿ ತಾಲೂಕು ಕಛೇರಿಯಲ್ಲಿನ ಕೆಲವು ಮಾಹಿತಿ ಹಕ್ಕು ಶೂರರು ಕೇಳಿದ ಪ್ರಶ್ನೆ ಯೇ ಸರಿಯಿಲ್ಲ ಎಂದು ಹಿಂಬರಹ ನೀಡಿದ್ದರು, ಅದರ ವಿರುದ್ಧ ಮೇಲ್ಮನವಿ ಸಲ್ಲಿಸಿದ್ದರಿಂದ ಉಪವಿಭಾಗಾಧಿಕಾರಿಗಳ ಸೂಚನೆಯಂತೆ ಮಾಹಿತಿ ನೀಡಲಾಗಿದ್ದು ಶೃಂಗೇರಿ ತಾಲೂಕು ಕಛೇರಿಯಿಂದ ಯಾವುದೇ 94ಸಿ ಹಾಗೂ 94ಸಿಸಿ ಹಕ್ಕು ಪತ್ರಗಳನ್ನು 2019 ರ ನಂತರದಿಂದ ಪ್ರಸ್ತುತ ವರ್ಷದವರೆಗೆ ನೀಡಿರುವುದಿಲ್ಲ ಎಂದು ತಹಸೀಲ್ದಾರ್ ಹಾಗೂ ತಾಲೂಕು ಕಾರ್ಯನಿರ್ವಾಹಕ ದಂಡಾಧಿಕಾರಿ ಕಾರ್ಯಾಲಯ ತಿಳಿಸಿದೆ.
ಇದನ್ನೂ ಓದಿ : ಮಗುಚಿ ಬಿದ್ದ ಶಾಲಾ ಬಸ್ ; ಕೆಲವು ಮಕ್ಕಳಿಗೆ ಗಾಯ
ದಿನದಿಂದ ದಿನಕ್ಕೆ ಒಂದೊಂದು ಹೊಸ ತಿರುವುಗಳು ಹಕ್ಕು ಪತ್ರದ ವಿಚಾರದಲ್ಲಿ ನಡೆಯುತ್ತಲಿವೆ. ಇತ್ತ ಒಟ್ಟು ತಾಲೂಕಿನಲ್ಲಿ 671 ಹಕ್ಕು ಪತ್ರಗಳನ್ನು ತೆಗೆದುಕೊಂಡವರು ಬಿಸಿ ತುಪ್ಪವನ್ನು ಬಾಯಲ್ಲಿ ಇಟ್ಟುಕೊಂಡ ರೀತಿಯಲ್ಲಿದ್ದಾರೆ ಇದಕ್ಕೆ ಅಂತ್ಯ ಯಾವಾಗ ಎಂಬುದನ್ನು ಕಾದುನೋಡಬೇಕಿದೆ.

0 Comments