ಕೊಪ್ಪ : (ನ್ಯೂಸ್ ಮಲ್ನಾಡ್ ವರದಿ) ಕೊಪ್ಪದ ಪ್ರಶಮನೀ ಆಸ್ಪತ್ರೆಯು ಆಯೋಜಿಸಿದ್ದ ಉಚಿತ ನೇತ್ರ ತಪಾಸಣಾ ಹಾಗೂ ಶಸ್ತ್ರಚಿಕಿತ್ಸಾ ಶಿಬಿರ ಅತ್ಯಂತ ಯಶಸ್ವಿಯಾಗಿ ನೆರವೇರಿತು.
ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ಪಟ್ಟಣದಲ್ಲಿರುವ ಪ್ರಶಮನೀ ಆಸ್ಪತ್ರೆಯು ಸಾರ್ವಜನಿಕರ ಹಿತಕ್ಕಾಗಿ ಆಯೋಜನೆ ನಡೆಸಿದ್ದ ಉಚಿತ ನೇತ್ರ ತಪಾಸಣೆ ಹಾಗೂ ಶಸ್ತ್ರ ಚಿಕಿತ್ಸಾ ಶಿಬಿರಕ್ಕೆ ಹಲವೆಡೆಗಳಿಂದ ಆಗಮಿಸಿದ್ದ ಜನರು ನೇತ್ರ ಸಂಬಂಧಿತ ಸಮಸ್ಯೆಗಳಿಗೆ ಅನೇಕರು ಪರಿಹಾರ ಕಂಡುಕೊಂಡರು.
ಈ ಶಿಬಿರದಲ್ಲಿ 138 ಜನರು ಉಚಿತ ನೇತ್ರ ತಪಾಸಣೆಗೆ ಒಳಪಟ್ಟರು ಹಾಗೂ 38 ಜನರು ಶಸ್ತ್ರ ಚಿಕಿತ್ಸೆಗೆ ಒಳಪಟ್ಟವರಾಗಿರುತ್ತಾರೆ ಎಂದು ಸಂಸ್ಥೆಯು ತಿಳಿಸಿದೆ. ಸಾರ್ವಜನಿಕ ವಲಯಕ್ಕೆ ಒಂದಿಲ್ಲೊಂದು ಸೇವೆಗಳ ಮೂಲಕ ಉತ್ತಮ ಸಹಾಯ ಹಸ್ತ ಚಾಚುತ್ತಿರುವ ಆಸ್ಪತ್ರೆಗೆ ಸಾರ್ವಜನಿಕರು ಧನ್ಯವಾದಗಳನ್ನು ತಿಳಿಸುತ್ತಿದ್ದಾರೆ ಮುಂಬರುವ ದಿನಗಳಲ್ಲಿ ಈ ರೀತಿಯ ಅನೇಕ ಉಪಯುಕ್ತ ಸೇವೆಗಳನ್ನು ಜನರಿಗೆ ನೀಡುವಂತಾಗಲಿ ಎಂದು ಚಿಕಿತ್ಸೆಪಡೆದವರು ಹಾರೈಸಿದ್ದಾರೆ.

0 Comments