ಚಿಕ್ಕಮಗಳೂರು : (ನ್ಯೂಸ್ ಮಲ್ನಾಡ್ ವರದಿ) ಬಾಲಕನೋರ್ವ ಆಕಸ್ಮಿಕವಾಗಿ ಕೆರೆಗೆ ಬಿದ್ದು ಸಾವನ್ನಪ್ಪಿದ ಘಟನೆ ಬೆಳಕಿಗೆ ಬಂದಿದೆ.

ಚಿಕ್ಕಮಗಳೂರು ಜಿಲ್ಲೆಯ ಅಜ್ಜಂಪುರದ ಸಮೀಪದಲ್ಲಿರುವ ಸಿದ್ಲೀಪುರದ ಚಿಕ್ಕ ಕೆರೆಗೆ ತೆರಳಿದ್ದ ಹದಿಮೂರು ವರ್ಷ ಪ್ರಾಯದ ಬಾಲಕ ವಿವೇಕ್ ಆಟವಾಡುವ ಸಲುವಾಗಿ ಕೆರೆಗೆ ತೆರಳಿದ್ದಾನೆ, ಅಲ್ಲೇ ಆಟವಾಡುವಾಗ ಆಕಸ್ಮಿಕವಾಗಿ ಕೆರೆಗೆ ಬಿದ್ದು ಸಾವನ್ನಪ್ಪಿದ್ದಾನೆ. 

ಮೊದಲೇ ಅತ್ಯಂತ ಕಡು ಬಡತನದಲ್ಲಿ ವಿವೇಕ್ ತಂದೆ ತಾಯಿ ಜೀವನ ಸಾಗಿಸುತ್ತಿದ್ದರು, ಸ್ಥಳಕ್ಕೆ ಆಗಮಿಸಿದ ಅಜ್ಜಂಪುರ ಪಿ.ಎಸ್.ಐ ಬಸವರಾಜು ಅವರು ಕುಟುಂಬದ ಪರಿಸ್ಥಿಯನ್ನು ಕಂಡು ತಮ್ಮ ಪೊಲೀಸ್ ವಾಹನದಲ್ಲೇ ಮೃತನ ಶವವನ್ನು ಆಸ್ಪತ್ರೆಗೆ ರವಾನಿಸಿದೆ.

ಶಿವಮೊಗ್ಗ ಮೂಲದ ಕುಟುಂಬ ವಿವೇಕ್ ನದ್ದಾಗಿದ್ದು, ಅತ್ಯಂತ ಬಡತನದಲ್ಲಿ ಅವರ ತಂದೆ ಜೀವನ ಸಾಗಿಸುತ್ತಿದ್ದರು. ಈ ದುರಂತವು ಅವರ ಜೀವನವನ್ನು ಇನ್ನಷ್ಟು ಕಠಿಣಮಾಡಿದೆ.